ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕೃಷಿ ನಗರದಲ್ಲಿರುವ ಪ್ರಕಾಶ್ ನಿವಾಸ ಹಾಗೂ ಅಂತರ ಗಂಗೆಯಲ್ಲಿರುವ ನಾಗೇಶ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ನಾಗೇಶ್ ಭದ್ರಾವತಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡ ಆಗಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ ಆಪ್ತ ಬಳಗದಲ್ಲಿದ್ದಾರೆ. ಈ ಹಿಂದೆ ಭದ್ರಾವತಿ ತಾಲ್ಲೂಕಿನ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.