ಯುಗಾದಿ ಹಬ್ಬದ ಸಂಭ್ರಮದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಸಿನಿ ಪ್ರಿಯರಿಗೆ ಸಿಹಿಸುದ್ದಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
.‘ಆಕಾಶ್‘ ಚಿತ್ರದ ನೆನಪುಗಳನ್ನು ಹಂಚಿಕೊಂಡ ರಮ್ಯಾ : ಅಪ್ಪು ಅಭಿಮಾನಿಗಳ ಮೆಚ್ಚುಗೆ.
ಯುಗಾದಿಗೆ ಶುಭಕೋರಿದ ರಿಷಬ್ ಶೆಟ್ಟಿ ಅವರು, ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎಂದು ನೋಟಿಸ್ ಬೋರ್ಡ್ ಮೇಲೆ ಬರೆದಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರು ನಿರ್ದೇಶಿಸಿ, ನಟಿಸಿರುವ ‘ಕಾಂತಾರ ಅಧ್ಯಾಯ–1’ ಚಿತ್ರದ ಕೊನೆಯಲ್ಲಿ ‘ಅಧ್ಯಾಯ–2’ ಬರಲಿದೆ ಎಂಬ ಸುಳಿವು ನೀಡಲಾಗಿತ್ತು.

ರಿಷಬ್ ಅವರು ಹಂಚಿಕೊಂಡ ಪೋಸ್ಟ್ಗೆ ಅಭಿಮಾನಿಗಳು ‘ಕಾಂತಾರ ಅಧ್ಯಾಯ–2’ ಅಥವಾ ‘ಸ.ಹಿ.ಪ್ರಾ.ಶಾಲೆ’ ಇರಬಹುದುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕಾಂತಾರ’ ಭಕ್ತಿಪ್ರಧಾನ ಕಥೆಯನ್ನು ಹೊಂದಿದ್ದರೆ, ‘ಕಾಂತಾರ ಅಧ್ಯಾಯ–1’ ಕಾಡಿನಂಚಿನ ಬುಡಕಟ್ಟು ಜನರು ಮತ್ತು ಉಳ್ಳವರು, ಅಧಿಕಾರಿಗಳ ನಡುವಿನ ದೈವ ಸಂಘರ್ಷ ಚಿತ್ರಜಗತ್ತಿನಲ್ಲೊಂದು ಹೊಸ ಲೋಕವನ್ನು ತೆರೆದಿಟ್ಟಿತ್ತು. ಈ ಚಿತ್ರಗಳನ್ನು ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು.

ಆದರೆ, ಮುಂಬರುವ ‘ಅಧ್ಯಾಯ–2’ ಅನ್ನು ರಿಷಬ್ ಶೆಟ್ಟಿ ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.