ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೃತಸರ ಸ್ವರ್ಣ ಮಂದಿರಕ್ಕೆ ಸಿಸೋಡಿಯಾ ಭೇಟಿ: ಕೇಜ್ರಿವಾಲ್ ಬಿಡುಗಡೆಗೆ ಪ್ರಾರ್ಥನೆ

Published : 25 ಆಗಸ್ಟ್ 2024, 14:35 IST
Last Updated : 25 ಆಗಸ್ಟ್ 2024, 14:35 IST
ಫಾಲೋ ಮಾಡಿ
Comments

ಅಮೃತಸರ: ಆಮ್‌ ಆದ್ಮಿ ಪಕ್ಷದ ಹಿರಿಯ ನಾಯಕ ಮನೀಶ್‌ ಸಿಸೋಡಿಯಾ ಅವರು ಭಾನುವಾರ ಪಂಜಾಬ್‌ನ ಸ್ವರ್ಣ ಮಂದಿರ ಮತ್ತು ದುರ್ಗಿಯಾನಾ ಮಂದಿರಕ್ಕೆ  ಭೇಟಿ ನೀಡಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಿಡುಗಡೆಗೆ ಪ್ರಾರ್ಥಿಸಿದರು.

ಸಿಸೋಡಿಯಾ ಅವರೊಂದಿಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಇದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಮತ್ತು ಕುಟುಂಬದವರು ಸಿಖ್‌ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥಿಸಿದೆವು’ ಎಂದು ಹೇಳಿದರು.

17 ತಿಂಗಳ ಜೈಲು ವಾಸವನ್ನು ನೆನೆದ ಅವರು, ‘ಪಿತೂರಿ ಮಾಡಿ ನನ್ನನ್ನು ಜೈಲಿನಲ್ಲಿ ಇಡಲಾಗಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT