‘ಸದಸ್ಯರ ಜತೆ ಕೂರಲಿರುವ ಸ್ಪೀಕರ್’
ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ಕಲಾಪದ ಅಧ್ಯಕ್ಷತೆ ವಹಿಸುವುದಿಲ್ಲ. ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೋರಿ ಸಲ್ಲಿಸಲಾದ ನೋಟಿಸ್ ಅನ್ನು ಸದನವು ಚರ್ಚೆಗೆ ಕೈಗೆತ್ತಿಕೊಳ್ಳಲಿರುವುದರಿಂದ ಅವರು ಸದಸ್ಯರೊಂದಿಗೆ ಕುಳಿತುಕೊಳ್ಳಲಿದ್ದಾರೆ. ಪ್ರಶ್ನೋತ್ತರ ಅವಧಿ ಇಲ್ಲ: ಲೋಕಸಭೆಯಲ್ಲಿ ಸೋಮವಾರ 11ರಿಂದ 12 ಗಂಟೆವರೆಗೆ ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಫೆಬ್ರುವರಿ 19ರಂದು ನಿಧನರಾದ ಶಿಲ್ಲಾಂಗ್ ಸಂಸದ ರಿಕಿ ಸಿಂಗ್ಕಾನ್ ಅವರ ಗೌರವಾರ್ಥವಾಗಿ ಪ್ರಶ್ನೋತ್ತರ ಅವಧಿಯನ್ನು ಮುಂದೂಡಲಾಗಿದೆ.