ಚೆನ್ನೈ: ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅಧಿಕಾರದ ಗದ್ದುಗೆಗೆ ಸನಿಹವಾಗಿದೆ. ಇದರೊಂದಿಗೆ, ಚುನಾವಣೆ ಪ್ರಚಾರ ಸಂದರ್ಭದಲ್ಲಿ ವಿಜಯ ಅವರು ನೀಡಿದ್ದ ಭರವಸೆಗಳು ಈಗ ಮತ್ತೆ ಚರ್ಚೆಗೆ ಕಾರಣವಾಗಿವೆ.

ವಿವಾಹವಾಗುವವರಿಗೆ 8 ಗ್ರಾಂ ಚಿನ್ನ ವಿತರಣೆ ಸೇರಿದಂತೆ ಭರಪೂರ ಘೋಷಣೆಗಳು ಕೂಡಾ ವಿಜಯ್ ಗೆಲುವಿಗೆ ಪ್ರಮುಖ ಕಾರಣವಾಗಿರಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ವಿಜಯ್ ಅಧಿಕಾರಕ್ಕೇರಿದರೆ ಎಲ್ಲ ಭರವಸೆಗಳನ್ನು ಈಡೇರಿಸುವರೇ ಎಂಬ ಲೆಕ್ಕಚಾರ ಮತದಾರರದ್ದಾಗಿದೆ.

60 ವಯೋಮಾನದ ಒಳಗಿನ ಮಹಿಳೆಯರಿಗೆ ಮಾಸಿಕ ₹2,500, ಬಡ ವಧುಗಳಿಗೆ 8 ಗ್ರಾಂ ಚಿನ್ನದ ಜೊತೆ ರೇಷ್ಮೆ ಸೀರೆ ಮತ್ತು ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಉಚಿತವಾಗಿ ಆರು ಸಿಲಿಂಡರ್ ನೀಡುವುದಾಗಿ ವಿಜಯ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.

ಮಹಿಳೆಯರು ನಡೆಸುವ ಸ್ವಸಹಾಯ ಸಂಘಗಳಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ ವಿತರಣೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ತಾಯಿ ಅಥವಾ ಪೋಷಕರಿಗೆ ವರ್ಷಕ್ಕೆ ₹15 ಸಾವಿರ ನೀಡುವುದಾಗಿ ವಿಜಯ್ ಹೇಳಿದ್ದರು.

ಆಸ್ಪತ್ರೆಗಳ ಆಧುನೀಕರಣ, ₹25 ಲಕ್ಷ ಮೊತ್ತದ ಕುಟುಂಬ ಆರೋಗ್ಯ ವಿಮಾ ಯೋಜನೆ ಪರಿಚಯಿಸಲಾಗುವುದು. ವೃದ್ಧರು ಮತ್ತು ಅಂಗವಿಕಲರಿಗೆ ಮಾಸಿಕ ₹3 ಸಾವಿರ ಪಿಂಚಣಿ, 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಭರವಸೆ ನೀಡಿದ್ದರು.

ಇನ್ನೂ ಹಲವು ಭರವಸೆಗಳನ್ನು ವಿಜಯ್ ನೀಡಿದ್ದು, ಅಧಿಕಾರಕ್ಕೇರಿದ ಬಳಿಕ ಈ ಭರವಸೆಗಳು ಅನುಷ್ಠಾನಗೊಳ್ಳಬಹುದೇ ಎನ್ನುವುದನ್ನು ಮತದಾರರು ಎದುರು ನೋಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.