ಚೆನ್ನೈ: ಜನಪ್ರಿಯ ನಟ ಕಮಲ್ ಹಾಸನ್ ಹಾಗೂ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಇಂಡಿಯನ್ 2' ಚಿತ್ರದ ಶೂಟಿಂಗ್ ವೇಳೆ ಕ್ರೇನ್ ಕುಸಿದು ಬಿದ್ದುಸಂಭವಿಸಿದ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದಾರೆ.
ಚೆನ್ನೈ ನಗರದ ಹೊರವಲಯದಲ್ಲಿ ಬುಧವಾರ ರಾತ್ರಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು 10 ಮಂದಿಗೆ ಗಾಯಗಳಾಗಿವೆ. ಕ್ರೇನ್‌ಗೆ ಕಟ್ಟಿದ ಹಗ್ಗ ತುಂಡಾಗಿ ಬಿದ್ದಾಗ, ಕ್ರೇನ್‌ನ ಅಡಿಗೆ ಸಿಲುಕಿ ಪ್ರಾಣಾಪಾಯ ಸಂಭವಿಸಿದೆ ಎನ್ನಲಾಗಿದೆ.
Shocked to hear about the accident on the set of my film indian 2.. I don’t even know how to process the loss of lives.. my Heart goes out to families of the deceased .. extremely extremely sad 😔
ಸಹಾಯಕ ನಿರ್ದೇಶಕ ಕೃಷ್ಣಮತ್ತು ಪ್ರೊಡಕ್ಷನ್ ಅಸಿಸ್ಟೆಂಟ್ ಮಧು ಮತ್ತು ಆರ್ಟ್ ಅಸಿಸ್ಟೆಂಟ್ಚಂದ್ರನ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 10ಕ್ಕಿಂತ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಮೂವರು ಸಾವಿಗೀಡಾಗಿದ್ದಾರೆ ಎಂದು ಹೇಳಿದ ಪೊಲೀಸರು ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ.
ಚೆನ್ನೈ ಹೊರವಲಯ ಪೂನಮಲ್ಲಿಯಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಬುಧವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. 1996ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಸಿನಿಮಾ ಇಂಡಿಯನ್‌ನ ಮುಂದುವರಿದ ಭಾಗವಾಗಿದೆ ಇಂಡಿಯನ್ 2.ಈ ಘಟನೆ ಸಂಭವಿಸಿದಾಗ ಕಮಲ್ ಹಾಸನ್ ಮತ್ತು ನಿರ್ದೇಶಕ ಎಸ್. ಶಂಕರ್ ಸ್ಥಳದಲ್ಲೇ ಇದ್ದರು.