ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶ ಹಿಂಸಾಚಾರ: ತಮಿಳರಿಗಾಗಿ ಸಹಾಯವಾಣಿ ಅರಂಭಿಸಿದ ಸ್ಟಾಲಿನ್ ಸರ್ಕಾರ

Published : 21 ಜುಲೈ 2024, 4:59 IST
Last Updated : 21 ಜುಲೈ 2024, 4:59 IST
ಫಾಲೋ ಮಾಡಿ
Comments

ಚೆನ್ನೈ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಿಲುಕಿರುವ ತಮಿಳರಿಗಾಗಿ ತಮಿಳುನಾಡು ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ.

ನಾಗರಿಕರು ಸುರಕ್ಷಿತವಾಗಿ ಮರಳಲು ಬಾಂಗ್ಲಾದೇಶವು ಅನುವು ಮಾಡಿಕೊಡುತ್ತಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ಭಾರತೀಯರು, ತಮ್ಮ ಸುರಕ್ಷತೆಗಾಗಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿ ಎಂದು ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದ್ದಾಗಿ ಸಾರ್ವಜನಿಕ ಮತ್ತು ಪುನರ್ವಸತಿ ಇಲಾಖೆಯ ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.

'ಅನಿವಾಸಿ ತಮಿಳರ ಪುನರ್ವಸತಿ ಮತ್ತು ಕಲ್ಯಾಣ ಕಮಿಷನರೇಟ್, ಬಾಂಗ್ಲಾದೇಶದಲ್ಲಿ ನೆಲೆಸಿರುವ ತಮಿಳರ ವಿವರಗಳನ್ನು ಸಂಗ್ರಹಿಸಲು ಭಾರತೀಯ ರಾಯಭಾರ ಕಚೇರಿ ಮತ್ತು ತಮಿಳು ಸಂಘಟನೆಗಳನ್ನು ಸಂಪರ್ಕಿಸಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಹಿಂಸಾಚಾರದಲ್ಲಿ ಸಿಲುಕಿರುವ ತಮಿಳರಿಗೆ ಎಲ್ಲಾ ಸಹಾಯವನ್ನು ನೀಡಲು ಸರ್ಕಾರ ಸಜ್ಜಾಗಿದೆ' ಎಂದು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನೆಲೆಸಿರುವ ತಮಿಳರ ಕುಟುಂಬಗಳು ಟೋಲ್ ಫ್ರೀ ಸಂಖ್ಯೆ +911800303793, +918069009900, +918069009901 ಅನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಬಾಂಗ್ಲಾದೇಶದ ಹಲವೆಡೆ ಶನಿವಾರ ಕಠಿಣ ನಿಷೇಧಾಜ್ಞೆ ಮುಂದುವರಿದಿತ್ತು. ರಾಜಧಾನಿ ಢಾಕಾದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸುವ ಸಲುವಾಗಿ ಭದ್ರತಾ ಪಡೆಗಳು ಪಹರೆ ಕಾರ್ಯದಲ್ಲಿ ನಿರತವಾಗಿವೆ.

ಇಲ್ಲಿಯವರೆಗೆ 103 ಮಂದಿ ಮೃತಪಟ್ಟಿದ್ದಾರೆ ಎಂದು ಡೈಲಿ ಪ್ರೊಥೊಮ್‌ ಅಲೋ ಸುದ್ದಿಪತ್ರಿಕೆ ವರದಿ ಮಾಡಿದೆ. ಹಿಂಸಾಚಾರದಲ್ಲಿ ಸುಮಾರು ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಢಾಕಾದಲ್ಲಿಯ ಅಮೆರಿಕ ರಾಯಭಾರ ಕಚೇರಿಯು ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT