ನವದೆಹಲಿ/ ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ.

ನಂದಿಗ್ರಾಮ ಮತ್ತು ಮಮತಾ ಬ್ಯಾನರ್ಜಿ ಕ್ಷೇತ್ರವಾದ ಭವಾನಿಪುರದಿಂದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಟಿಎಂಸಿ ಮುಖ್ಯಸ್ಥೆ ಮಮತಾ ಅವರಿಗೆ ನೇರವಾಗಿ ಸವಾಲೆಸೆದಿದೆ.

ನಂದಿಗ್ರಾಮವು 2007ರ ಭೂಸ್ವಾಧೀನ ವಿರೋಧಿ ಅಭಿಯಾನದ ಕೇಂದ್ರಬಿಂದುವಾಗಿದ್ದು, ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೆ ಬರಲು ಕಾರಣವಾಗಿತ್ತು. 2021ರಲ್ಲಿ ಈ ಕ್ಷೇತ್ರದಿಂದ ಮಮತಾ ಅವರನ್ನು ಸುವೇಂದು ಅವರು ಕೇವಲ 1,900 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು.

ಭವಾನಿಪುರ ಕ್ಷೇತ್ರವು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದು, 2021ರ ಉಪಚುನಾವಣೆಯಲ್ಲಿ 58,000 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಮೊದಲ ಪಟ್ಟಿಯಲ್ಲಿ 41 ಹಾಲಿ ಶಾಸಕರಿಗೆ, ಮೂವರು ಮಾಜಿ ಶಾಸಕರಿಗೆ ಮತ್ತು ಇಬ್ಬರು ಮಾಜಿ ಸಂಸದರಿಗೆ ಟಿಕೆಟ್ ನೀಡಿದೆ. 11 ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.