ಬೆಂಗಳೂರು: ಅರಣ್ಯ ಇಲಾಖೆ ನೀತಿಗಳಿಂದ ರೈತರಿಗೆ ಭೂಮಿ ಮೇಲಿನ ಹಕ್ಕು ಕೈತಪ್ಪುವುದನ್ನು ಖಂಡಿಸಿ ಸುಮಾರು ಮೂರು ದಶಕಗಳ ಕಾಲ ಹೋರಾಡಿದವರು ಎಸ್.ಆರ್.ರಾಮಸ್ವಾಮಿ ಅವರು.

ರೈತರ ಪರ ಹೋರಾಟದ ಜತೆಗೆ, ಸ್ವದೇಶಿ ಚಳವಳಿಯಲ್ಲೂ ಸಕ್ರಿಯರಾಗಿದ್ದ ಅವರು ಜತೆಜತೆಗೆ ಸಾಹಿತ್ಯ ಕೃಷಿಯನ್ನೂ ಕೈಗೊಂಡವರು. 50ಕ್ಕೂ ಹೆಚ್ಚು ಕೃತಿಗಳು ಮತ್ತು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಅವರು ರಚಿಸಿದ್ದಾರೆ.

1972ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದ ಅವರು, ನಂತರ ಉತ್ಥಾನ ಮಾಸಿಕದಲ್ಲಿ ಮುಖ್ಯ ಸಂಪಾದಕರಾಗಿದ್ದರು. ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಹಾಗೂ ಗೋಖಲೆ ಸಾರ್ವಜನಿಕ ವ್ಯವಹಾರಗಳ ಸಂಸ್ಥೆಯ ಬೆಂಗಳೂರು ವಿಭಾಗದ ಗೌರವ ಕಾರ್ಯದರ್ಶಿಯಾಗಿಯೂ ಸಾಮಾಜಿಕ ಕಾರ್ಯಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.
.ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಎಸ್.ಆರ್. ರಾಮಸ್ವಾಮಿ ನಿಧನ.
ಸಾಹಿತ್ಯ ಕ್ಷೇತ್ರದ ಪ್ರಮಖರಾದ ಡಿ.ವಿ.ಗುಂಡಪ್ಪ, ವಿ.ಸೀತಾರಾಮಯ್ಯ, ಎಸ್. ಶ್ರೀಕಂಠ ಶಾಸ್ತ್ರಿ, ರಲ್ಲಪಲ್ಲಿ ಅನಂತಕೃಷ್ಣ ಶರ್ಮಾ, ಯಾದವರಾವ್ ಜೋಶಿ ಮತ್ತು ಪಿ. ಕೋದಂಡ ರಾವ್ ಅವರೊಡನೆ ಡಾ. ರಾಮಸ್ವಾಮಿ ಅವರು ಉತ್ತಮ ಒಡನಾಟ ಹೊಂದಿದ್ದರು.

ಮಹಾಭಾರತದ ಬೆಳವಣಿಗೆ, ಕಾರ್ಗಿಲ್ ಕಂಪನ, ಸ್ವದೇಶಿ ಒಂದು ಸಂವಾದ, ಮತಾಂತರ ಒಂದು ಸಂವಾದ, ಆರ್ಥಿಕತೆಯ ಎರಡು ಧ್ರುವ, ಡಿವಿಜಿ, ಚಿ. ಉದಯಶಂಕರ್, ಜಯಪ್ರಕಾಶ ನಾರಾಯಣ ಸೇರಿದಂತೆ ಪ್ರಮುಖ ಜೀವನ ಚರಿತ್ರೆ ಸೇರಿದಂತೆ ಹಲವು ಕೃತಿಗಳನ್ನು ಅವರು ರಚಿಸಿದ್ದಾರೆ. ನೆಹರು ಅವರ ಪತ್ರಗಳನ್ನು ಆಧರಿಸಿ ಪತ್ರಗುಚ್ಛ, ಮನೋಬೋಧ, ಮಹಾವೇಧ ಸೇರಿದಂತೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಅರವಿಂದ, ಭಾರತದಲ್ಲಿ ಸಮಾಜಕಾರ್ಯ ಸೇರಿದಂತೆ ಕೆಲ ಕೃತಿಗಳನ್ನು ಸಂಪಾದಿಸಿದವರು ರಾಮಸ್ವಾಮಿ ಅವರು.

ಇವರ ಶತಮಾನದ ತಿರುವಿನಲ್ಲಿ ಭಾರತ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಕೃಷಿಗಾಗಿ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ, ಪಂಪ ಪ್ರಶಸ್ತಿ, ಡಾ. ಎಸ್.ಎಲ್ ಬೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಸಂದಿವೆ.

ಹಿರಿಯ ವಿದ್ವಾಂಸರಾದ ಡಾ. ಎಸ್.ಆರ್. ರಾಮಸ್ವಾಮಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಮಧ್ಯಾಹ್ನ 12ರ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.