ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 17ನೇ ಬಜೆಟ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಿಂದ ಮಿಶ್ರ ಮತ್ತು ತರಹೇವಾರಿ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಜೆಟ್ ಭಾಷಣ ಆರಂಭಕ್ಕೂ ಮುನ್ನ ವಿರೋಧ ಪಕ್ಷಗಳ ಮೊಗಸಾಲೆಯಲ್ಲಿ, ‘ಇದು ಅವರ ಕೊನೆಯ ಬಜೆಟ್’, ‘ಇಲ್ಲ, ವಜೂಭಾಯಿವಾಲಾ ಅವರು 18 ಬಜೆಟ್ ಮಂಡಿಸಿದ್ದಾರೆ. ಆ ದಾಖಲೆಯನ್ನು ಮುರಿದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುವುದು’, ‘ಹಾಗಿದ್ದರೆ, ಡಿ.ಕೆ.ಶಿವಕುಮಾರ್ ಅವರು ನಿಜವಾಗಿಯೂ ಸಿಟ್ಟಾಗಬೇಕಿರುವುದು ವಜೂಭಾಯಿ ಅವರ ಮೇಲೆ’ ಎಂಬ ಚರ್ಚೆ ನಡೆಯುತ್ತಿತ್ತು.

‘ನೋಡಿ, ಸಿದ್ದರಾಮಯ್ಯ ಅವರೇ ಮೂಢನಂಬಿಕೆ ನಿಷಿದ್ಧ ಕಾನೂನು ತಂದರು. ಆದರೆ, ರಾಹುಕಾಲ (ಬೆಳಿಗ್ಗೆ 10.30ಕ್ಕೆ) ಆರಂಭಕ್ಕೂ ಮುನ್ನ ಬಜೆಟ್ ಭಾಷಣ ಆರಂಭಕ್ಕೆ ಸಮಯ ನಿಗದಿ (ಬೆಳಿಗ್ಗೆ 10.15ಕ್ಕೆ) ಮಾಡಿದ್ದಾರೆ. ಇದೂ ಮೂಢನಂಬಿಕೆ ಅಲ್ಲವೇ’ ಎಂದು ವಿರೋಧ ಪಕ್ಷದ ಶಾಸಕರೊಬ್ಬರು ಸುದ್ದಿಗಾರರತ್ತ ಪ್ರಶ್ನೆ ಎಸೆದರು.

10.20ರ ಹೊತ್ತಿಗೆ ಸದನಕ್ಕೆ ಬಂದ ಸಿದ್ದರಾಮಯ್ಯ ಅವರು, ನಿರರ್ಗಳವಾಗಿ ಬಜೆಟ್ ಓದಲು ಆರಂಭಿಸಿದರು. ಜಿಎಸ್ಟಿ ಸ್ಲ್ಯಾಬ್ಗಳ ಪರಿಷ್ಕರಣೆಯಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಅವರು ಪ್ರಸ್ತಾಪಿಸಿದ ಕೂಡಲೇ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಆಕ್ಷೇಪ ಎತ್ತಿದರು. ಆದರೆ, ವಿರೋಧ ಪಕ್ಷಗಳ ಇತರ ಸದಸ್ಯರು ದನಿಗೂಡಿಸದ ಕಾರಣ, ಸುಮ್ಮನೆ ಕುಳಿತರು.

ಈ ಮಧ್ಯೆ, 11.30ರ ಹೊತ್ತಿಗೆ ಸಿದ್ದರಾಮಯ್ಯ ಅವರು ತುಸು ತಡವರಿಸಿದರು. ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಅವರು, ‘ನೀವು ಕೂತೇ ಬಜೆಟ್ ಓದಿ’ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದರು. ಅರವಿಂದ ಬೆಲ್ಲದ್ ಸಹ ದನಿಗೂಡಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಕಷ್ಟವಾದರೆ ಕುಳಿತುಕೊಳ್ಳಿ’ ಎಂದರು. ಸಿದ್ದರಾಮಯ್ಯ ಅವರು, ‘ಕಷ್ಟವಾದರೆ ಕೂರುತ್ತೇನೆ. ಆದರೆ, ಅಲ್ಲಿಯವರೆಗೂ ನಿಂತುಕೊಂಡೇ ಓದುತ್ತೇನೆ’ ಎಂದರು.

1 ಗಂಟೆಯ ಹೊತ್ತಿಗೆ ಸಿದ್ದರಾಮಯ್ಯ ಅವರ ಬಜೆಟ್ ಓದಿನ ವೇಗ ನಿಧಾನವಾಯಿತು. ಸಭಾಧ್ಯಕ್ಷ ಖಾದರ್ ಅವರು, ಕುಳಿತುಕೊಂಡು ಓದಿ ಎಂದು ಮತ್ತೆ ಹೇಳಿದರೂ ಸಿದ್ದರಾಮಯ್ಯ ನಿಂತುಕೊಂಡೇ ಮುಂದುವರೆಸಿದರು. 1.50ರ ಹೊತ್ತಿಗೆ ಒಟ್ಟು ಮೂರೂವರೆ ಗಂಟೆ ಸಿದ್ದರಾಮಯ್ಯ ಬಜೆಟ್ ಮಂಡಿಸಿದರು. ಬಜೆಟ್ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ಸದಸ್ಯರು, ‘ಚೊಂಬಿನ ಬಜೆಟ್, ಗೋವಿಂದ ಚೊಂಬೋವಿಂದ, ಖಾಲಿ ಬಜೆಟ್’ ಎಂದು ಕೂಗಿದರು. ವಿಧಾನಸೌಧದ ಹೊರಗೆ, ನಾಮ ಬಳಿದ ಚೊಂಬು ಹಿಡಿದು ‘ಚೊಂಬಿನ ಬಜೆಟ್’ ಎಂದು ಘೋಷಣೆ ಕೂಗಿದರು.

ಸಂವಿಧಾನ ಪ್ರಸ್ತಾವನೆ ಓದು: ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಖಾದರ್ ಅವರು ಎಲ್ಲ ಸದಸ್ಯರಿಗೆ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.