ಬೆಂಗಳೂರು: ಕರ್ನಾಟಕಕ್ಕೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆ ಶೇ 68ರಷ್ಟು ಹೆಚ್ಚಳವಾಗಿದೆ. ಅಗತ್ಯ ಹಾಗೂ ಆದ್ಯತೆಗೆ ತಕ್ಕಂತೆ ಭಾನುವಾರದಿಂದಲೇ (ಮಾ. 29) ಈ ಹೆಚ್ಚುವರಿ ಸಿಲಿಂಡರ್ಗಳು ಲಭ್ಯವಾಗಲಿವೆ.

ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ ಈ ವಿಷಯ ತಿಳಿಸಿದರು. ‘ರಾಜ್ಯದಾದ್ಯಂತ ಪ್ರತಿದಿನ ಸುಮಾರು 4 ಲಕ್ಷ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗಳು ಹಾಗೂ ಸುಮಾರು 18 ಸಾವಿರ ವಾಣಿಜ್ಯ ಬಳಕೆಯ ಸಿಲಿಂಡರ್ಗಳನ್ನು ಪೂರೈಕೆ ಮಾಡಲಾಗುತ್ತಿದೆ’ ಎಂದರು.

‘ಗೃಹ ಬಳಕೆದಾರರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ನಗರ ಪ್ರದೇಶಗಳ ಗೃಹ ಬಳಕೆದಾರರಿಗೆ ಪ್ರತಿ 25 ದಿನಗಳಿಗೊಮ್ಮೆ ಒಂದು ಸಿಲಿಂಡರ್ ವಿತರಿಸಲಾಗುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ 45 ದಿನಗಳಿಗೊಮ್ಮೆ ಒಂದು ಸಿಲಿಂಡರ್ ಪೂರೈಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

‘ಎಲ್ಪಿಜಿ ಸಿಲಿಂಡರ್ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವರ ಜೊತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಇದೇ 31ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ವಾಣಿಜ್ಯ ಬಳಕೆಯ ಹೆಚ್ಚುವರಿ ಸಿಲಿಂಡರ್ಗಳ ಪೂರೈಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ಅಂದು ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿರುವ ವಿಚಾರವೂ ಗಮನಕ್ಕೆ ಬಂದಿದೆ. ಈ ಬಗ್ಗೆಯೂ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಆಸ್ಪತ್ರೆಗಳಿಗೆ ಶೇ 100ರಷ್ಟು, ಹೋಟೆಲ್ಗಳಿಗೆ ಶೇ 20ರಷ್ಟು ಎಲ್ಪಿಜಿ ಪೂರೈಕೆಯಾಗುತ್ತಿದೆ. ಸಾಧ್ಯವಾದಷ್ಟು ಮಟ್ಟಿಗೆ ಹೋಟೆಲ್ಗಳಿಗೂ ಹೆಚ್ಚುವರಿ ವಾಣಿಜ್ಯ ಸಿಲಿಂಡರ್ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲಾಗಿದೆ’ ಎಂದು ತಿಳಿಸಿದರು.

ಗಮನಾರ್ಹ ಸುಧಾರಣೆ: ‘ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಸಿಲಿಂಡರ್ ಪೂರೈಕೆ ಆಗುತ್ತಿರುವುದರಿಂದ ರಾಜ್ಯದಲ್ಲಿ ಎಲ್ಪಿಜಿ ಪೂರೈಕೆ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಗಮನಾರ್ಹವಾಗಿ ಸುಧಾರಣೆಯಾಗುವ ನಿರೀಕ್ಷೆ ಇದೆ’ ಎಂದು ಮುನಿಯಪ್ಪ ಹೇಳಿದರು.

‘ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಗ್ರಾಹಕರು ವಿತರಕ ಏಜೆನ್ಸಿಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು. ಮೊಬೈಲ್ ಮೂಲಕ ಬುಕಿಂಗ್ ಮಾಡಿದವರಿಗೆ ಮನೆ ಬಾಗಿಲಿಗೆ ಸಿಲಿಂಡರ್ ಪೂರೈಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಸಾರ್ವಜನಿಕರು, ಹೋಟೆಲ್ ಮಾಲೀಕರು, ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬಳಕೆದಾರರು ಅನವಶ್ಯವಾಗಿ ಮುಂಗಡ ಬುಕಿಂಗ್ ಮಾಡದೆ ಸರ್ಕಾರದ ಜೊತೆ ಸಹಕರಿಸಬೇಕು. ವಾಣಿಜ್ಯ ಬಳಕೆದಾರರು ಸಾಧ್ಯವಾದಷ್ಟು ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಬಳಕೆ ಮಾಡಬೇಕು’ ಎಂದೂ ಮನವಿ ಮಾಡಿದರು.

27 ಎಫ್ಐಆರ್ ದಾಖಲು 1,169 ಅಕ್ರಮ ಬಳಕೆಯ ಪ್ರಕರಣಗಳು 1,603 ಸಿಲಿಂಡರ್ ವಶ

ಪ್ರತಿದಿನ ಯಾರಿಗೆ ಎಷ್ಟು?

ಆದ್ಯತಾ ವಲಯ;ವರ್ಗ;ಸಿಲಿಂಡರ್ ಸಂಖ್ಯೆ

1;ಶಿಕ್ಷಣ ಸಂಸ್ಥೆಗಳು ವಸತಿ ನಿಲಯಗಳು ಆಸ್ಪತ್ರೆ ಮತ್ತು ಇತರೆ ಅವಶ್ಯ ಸಂಸ್ಥೆಗಳು;4200

2;ಸರ್ಕಾರ / ಪಿಎಸ್ಯು ಸಂಸ್ಥೆಗಳು ವಿಮಾನ ನಿಲ್ದಾಣ ರೈಲು ಬಸ್ ನಿಲ್ದಾಣಗಳ ಕ್ಯಾಂಟೀನ್ಗಳು;1200

3;ಹೋಟೆಲ್ ದಾಬಾ ರೆಸ್ಟೋರೆಂಟ್ ಕಾರ್ಖಾನೆ ಕೆಎಂಎಫ್ ಡೇರಿ ಸಮುದಾಯ ಅಡುಗೆ ಕೇಂದ್ರಗಳು ಪಿ.ಜಿ ಕ್ಯಾಂಟೀನ್ ಕ್ರೀಡಾ ವಸತಿ ನಿಲಯಗಳು;17500

4;ಬೀಜ ಸಂಸ್ಕರಣೆ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಔಷಧೋದ್ಯಮ ಮೀನುಗಾರಿಕೆ ಕೋಳಿ ಸಾಕಣೆ ರೇಷ್ಮೆ ಹುಳು ಸಾಕಣೆ;6000

5;ಇತರೆ ಅಗತ್ಯಗಳ ಆಧಾರದ ಮೇಲೆ;563

ಒಟ್ಟು;29463 ಆಟೊ ಎಲ್ಪಿಜಿ ಇತರೆ ವಲಯಗಳಿಗೆ ಹಿಂದಿನ ಹಂಚಿಕೆ ಆದೇಶದಂತೆ ಸಿಲಿಂಡರ್ ಪೂರೈಕೆ ಮುಂದುವರಿಯಲಿದೆ.

‘ಆಟೊ ಎಲ್ಪಿಜಿ ಕೊರತೆ ಇಲ್ಲ’

‘ಆಟೊ ಎಲ್ಪಿಜಿಗೆ ಯಾವುದೇ ರೀತಿಯ ಕೊರತೆ ಇಲ್ಲ’ ಎಂದು ಆಹಾರ ಇಲಾಖೆಯ ಪ್ರಕಟಣೆ ತಿಳಿಸಿದೆ. ‘ಕರ್ನಾಟಕದಾದ್ಯಂತ ಒಟ್ಟು 72 ಆಟೊ ಎಲ್ಪಿಜಿ ಡಿಸ್ಪೆನ್ಸಿಂಗ್ ಸ್ಟೇಷನ್ಗಳು (ಎಎಲ್ಡಿಎಸ್) ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಬೆಂಗಳೂರು ನಗರವೊಂದರಲ್ಲೇ 31 ಕೇಂದ್ರಗಳಿವೆ. ಎಲ್ಪಿಜಿ ಸರಬರಾಜು ವ್ಯವಸ್ಥೆ ವಿಶೇಷವಾಗಿ ಆಟೊ ಎಲ್ಪಿಜಿ ಪೂರೈಕೆಯ ಮೇಲೆ ನಿಗಾ ವಹಿಸಲಾಗಿದೆ’ ಎಂದು ಇಲಾಖೆ ತಿಳಿಸಿದೆ. ‘ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರಾಟ ಕಂಪನಿಗಳಾದ ಐಒಸಿಎಲ್ ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಮೂಲಕ ಆಟೊ ಎಲ್ಪಿಜಿ ಸರಬರಾಜು ಮಾಡಲಾಗುತ್ತಿದೆ. ಈ ಸಂಸ್ಥೆಗಳು ಪ್ರತಿ ಲೀಟರ್ಗೆ ₹77.74ರ ದರದಲ್ಲಿ ಆಟೊ ಎಲ್ಪಿಜಿ ಪೂರೈಸುತ್ತಿವೆ. ಕಳೆದ ವಾರದಲ್ಲಿ ದಿನಕ್ಕೆ ಸರಾಸರಿ 64.9 ಟನ್ ಆಟೊ ಎಲ್ಪಿಜಿ ವಿತರಿಸಲಾಗಿದೆ. ಯುದ್ಧ ಸಂಘರ್ಷದ ಮೊದಲು ಈ ಪ್ರಮಾಣವು ದಿನಕ್ಕೆ 57.6 ಟನ್ ಇತ್ತು. ಪೂರೈಕೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ’ ಎಂದೂ ಇಲಾಖೆ ಹೇಳಿದೆ.

‘ಹಳ್ಳಿಗಳಲ್ಲಿ ಸೌದೆ ಒಲೆ ಬಳಸಿ’

‘ಸಂಕಷ್ಟ ಕಾಲದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು. ಎಲ್ಪಿಜಿ ಮಿತಬಳಕೆ ಮಾಡಬೇಕು. ನಗರ ಭಾಗದಲ್ಲಿ ಎಲೆಕ್ಟ್ರಿಕ್ ಸ್ಟವ್ ಬಳಸಬೇಕು. ಹಳ್ಳಿ ಭಾಗದಲ್ಲಿ ಸೌದೆ ಒಲೆ ಮೂಲಕ ಅಡುಗೆ ಮಾಡಬೇಕು’ ಎಂದು ಮುನಿಯಪ್ಪ ಮನವಿ ಮಾಡಿದರು. ‘ಗ್ರಾಮೀಣ ಭಾಗದಲ್ಲಿ ಶತಮಾನಗಳಿಂದ ಸೌದೆ ಬಳಸಿ ಅಡುಗೆ ಮಾಡಿರುವುದನ್ನು ನೋಡಿದ್ದೇವೆ. ಸಿಲಿಂಡರ್ ಅಭಾವ ಇರುವುದರಿಂದ ಹಳ್ಳಿಯ ಜನ ಸೌದೆ ಒಲೆಗಳನ್ನು ಬಳಸಬೇಕು. ಬೆಂಗಳೂರು ಬಿಟ್ಟು 40 ಕಿ.ಮೀ. ಹೋದರೆ ಸೌದೆ ಸಿಗುತ್ತದೆ. ಅರಣ್ಯ ಪ್ರದೇಶ ಇರುವ ಕಡೆ ಹಸಿ ಮರ ಬಿಟ್ಟು ಒಣ ಸೌದೆ ಬಳಸಬಹುದು’ ಎಂದು ಅವರು ಸಲಹೆ ನೀಡಿದರು.

‘ಹೆಚ್ಚಿನ ದರಕ್ಕೆ ಮಾರಿದರೆ ಕ್ರಮ’

‘ಕೆಲವು ಖಾಸಗಿ ಅನಿಲ ವಿತರಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರಕ್ಕೆ ಎಲ್ಪಿಜಿ ಸಿಲಿಂಡರ್ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ವಿತರಿಸಬೇಕೆಂದು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಮುನಿಯಪ್ಪ ಹೇಳಿದರು. ‘ಹೆಚ್ಚು ದರ ವಸೂಲಿ ಮಾಡಿ ಕಾಳಸಂತೆಯಲ್ಲಿ ಗೃಹ ಬಳಕೆ ವಾಣಿಜ್ಯ ಬಳಕೆ ಆಟೊ ಎಲ್ಪಿಜಿಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಅಂತಹ ವಿತರಕರ ಪರವಾನಗಿ ರದ್ದುಗೊಳಿಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆಯಲ್ಲಿ ಸಿಲಿಂಡರ್ಗಳ ಮಾರಾಟ ತಡೆಯಲು ದಾಳಿಗಳನ್ನು ಮತ್ತು ಪರಿಶೀಲನೆಗಳನ್ನು ಹೆಚ್ಚಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.