ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದ ಬೇರೆ ಬೇರೆ ಕಾರಾಗೃಹಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು, ಕಾರಾಗೃಹದಲ್ಲಿ ಸುಧಾರಣೆ ತರಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಸೋಮವಾರ ಪ್ರಕಟಿಸಿದೆ.

ಹೊಸ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ, ಮಾರ್ಗಸೂಚಿ ಪಾಲನೆ ಮಾಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜೈಲಿನಲ್ಲಿ ಇರುವ ಕೈದಿಗಳಿಗೆ ನೀಡುತ್ತಿರುವ ಊಟದಲ್ಲೂ ಮಹತ್ವದ ಬದಲಾವಣೆ ತರಲಾಗಿದೆ. ವಿಚಾರಣಾಧೀನ ಕೈದಿಗಳು, ಸಜಾಬಂದಿಗಳ ಭೇಟಿಗೂ ಹೊಸ ನಿಯಮ ಜಾರಿಗೆ ತರಲಾಗಿದೆ. ಕೈದಿಗಳಿಗೆ ಗಂಭೀರ ಅನಾರೋಗ್ಯವಿದ್ದರೆ ಅಥವಾ ಗಾಯದಿಂದ ನಡೆಯಲು ಆಗದಿರುವ ಸಂದರ್ಭದಲ್ಲಿ ತಿಂಗಳಿಗೆ ಒಮ್ಮೆ ಕುಟುಂಬದವರು ಭೇಟಿ ಮಾಡುವುದಕ್ಕೆ ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ.

ಕೈದಿಗಳ ಭೇಟಿಗೆ ಹೊಸ ನಿಯಮಗಳು:
‘ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿಯಿದ್ದರೆ ಅಂತಹ ಸಂದರ್ಭದಲ್ಲಿ ಕೈದಿಯನ್ನು ಭೇಟಿ ಮಾಡಿ ಮಾಹಿತಿ ನೀಡಲು ಕುಟುಂಬದವರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಕೈದಿ ಸಜೆ ಮುಗಿದಿದ್ದು ಮುಂದಿನ ಜೀವನದ ಬಗ್ಗೆ ಚರ್ಚೆ ನಡೆಸುವುದಕ್ಕೂ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ, ವಾಸಸ್ಥಳ, ಸಲಹೆ ಇತ್ಯಾದಿ ವ್ಯವಸ್ಥೆಗಾಗಿ ಸಂದರ್ಶನಕ್ಕೆ ಅವಕಾಶ ಇದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭೇಟಿಯ ವೇಳೆ ಪಾಲಿಸಬೇಕಾದ ನಿಯಮಗಳು:

ಕೈದಿಗಳನ್ನು ಭೇಟಿ ಮಾಡಲು ಆಯಾ ಜೈಲು ಮುಖ್ಯಸ್ಥರ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ. ಜೈಲು ಭದ್ರತಾ ಕಾರಣಕ್ಕೆ ಸಿಬ್ಬಂದಿ ತಪಾಸಣೆಗೆ ಸಹಕಾರ ನೀಡಬೇಕು. ನಿಗದಿತ ಸಂದರ್ಶನ ಕೊಠಡಿಯಲ್ಲಿ ಮಾತ್ರವೇ ಕೈದಿಗಳನ್ನು ಭೇಟಿ ಮಾಡಬಹುದು. 30 ನಿಮಿಷ ಮಾತುಕತೆ ನಡೆಸಬಹುದು’ ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ.

‘5 ಮಂದಿಗೂ ಮೀರಿ ಭೇಟಿಗೆ ಅವಕಾಶ ಇಲ್ಲ. ಜೈಲು ಅಧಿಕಾರಿಯ ಮೇಲ್ವಿಚಾರಣೆ ಇರಬೇಕು. ಭೇಟಿಗೂ ಎರಡು ದಿನ ಮೊದಲು ಅರ್ಜಿ ಸಲ್ಲಿಸಬೇಕು. ತುರ್ತು ಕಾರಣವಿದ್ದರೆ ಕಾರಾಗೃಹ ಹಾಗೂ ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅವರನ್ನು ಭೇಟಿ ಮಾಡಿ ಅನುಮತಿ ಪಡೆದುಕೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಿಬ್ಬಂದಿ ವರ್ಗಾವಣೆ: ಹಲವು ವರ್ಷದಿಂದ ಒಂದೇ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹವರ ವರ್ಗಾವಣೆ ಮಾಡಲು ಚಿಂತನೆ ನಡೆದಿದೆ. ಒಂದೇ ಜಾಗದಲ್ಲಿ ಸಿಬ್ಬಂದಿ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದರೆ, ಕೈದಿಗಳ ಜತೆಗೆ ಆತ್ಮೀಯತೆ ಬೆಳೆದು ಅಕ್ರಮ ಚಟಿವಟಿಕೆಗೆ ಸಹಕಾರ ನೀಡುವ ಸಾಧ್ಯತೆ ಇರುತ್ತದೆ. ಅದೇ ಕಾರಣಕ್ಕೆ ವರ್ಗಾವಣೆಗೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮೂಲಗಳು ತಿಳಿಸಿವೆ.

ಸಿಬ್ಬಂದಿ ವರ್ಗಾವಣೆ:

ಹಲವು ವರ್ಷದಿಂದ ಒಂದೇ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹವರ ವರ್ಗಾವಣೆ ಮಾಡಲು ಚಿಂತನೆ ನಡೆದಿದೆ.ಒಂದೇ ಜಾಗದಲ್ಲಿ ಸಿಬ್ಬಂದಿ ಹಲವು ವರ್ಷದಿಂದ ಕೆಲಸಮಾಡುತ್ತಿದ್ದರೆ, ಕೈದಿಗಳಜತೆಗೆ ಆತ್ಮೀಯತೆ ಬೆಳೆದು ಅಕ್ರಮ ಚಟಿವಟಿಕೆಗೆ ಸಹಕಾರನೀಡುವಸಾಧ್ಯತೆ ಇರುತ್ತದೆ ಅದೇಕಾರಣಕ್ಕೆ ವರ್ಗಾವಣೆಗೂ ಕ್ರಮ ತೆಗೆದುಕೊ ಳ್ಳಲಾಗಿದೆಎಂದುಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.