ಬೆಂಗಳೂರು: ‘ಈ ಬಾರಿ ರಾಹುಕಾಲಕ್ಕೂ ಮೊದಲೇ ಬಜೆಟ್ ಮಂಡಿಸಿದ್ದೇನೆ. ನಿಮ್ಮಂತಹವರ ಮಾತು ಕೇಳಬೇಕಲ್ಲವಾ? ಮನೆಯವರು, ಅಧಿಕಾರಿಗಳ ಮಾತೂ ಕೇಳಬೇಕಲ್ಲವಾ? ಪ್ರಜಾತಂತ್ರದಲ್ಲಿ ಎಲ್ಲರ ಮಾತಿಗೂ ಮನ್ನಣೆ ನೀಡಬೇಕಲ್ಲವಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ರಾಹುಕಾಲದ ವಿಚಾರ ಪ್ರಸ್ತಾಪಿಸಿದರು.

‘ನಾನು ಹಣೆ ಬರಹ, ಕರ್ಮ ಸಿದ್ಧಾಂತ ಒಪ್ಪುವುದಿಲ್ಲ. ಬಸವಣ್ಣ ಅವರೂ ಕರ್ಮ ಸಿದ್ಧಾಂತವನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಅಶೋಕ, ‘ಕಾಮಾಕ್ಯಕ್ಕೂ ಹೋಗಿ ಭರ್ಜರಿ ಪೂಜೆ ಮಾಡಿಸುವವರೂ ನಿಮ್ಮವರೇ, ರಾಹುಕಾಲ ನೋಡಿ ಬಜೆಟ್ ಮಂಡಿಸುವವರೂ ನೀವೇ’ ಎಂದು ಕಾಲೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ರಾಹುಕಾಲ ನೋಡಿಕೊಂಡು ಬಜೆಟ್ ಮಂಡಿಸಿದ್ದಾರೆ ಎಂದಿದ್ದೀರಿ. ಹೌದು, ನಿಜ, ನಿಮ್ಮಂತವರ ಮಾತು ಕೇಳಬೇಕಲ್ಲವೇ? ಈ ಹಿಂದೆ ಹಲವು ಬಾರಿ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದೇನೆ. ಇತ್ತೀಚೆಗೆ ಮನೆಯವರ ಮತ್ತು ಅಧಿಕಾರಿಗಳ ಮಾತು ಕೇಳಬೇಕಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ, ‘ಆವತ್ತಿನ ಪರಿಸ್ಥಿತಿ ಬೇರೆ ಇತ್ತು. ಇವತ್ತಿನ ಪರಿಸ್ಥಿತಿ ಬೇರೆ ಇದೆ. ಮುಂದೆಯೂ ಬಜೆಟ್ ಮಂಡಿಸಬೇಕಲ್ಲ. ಅದಕ್ಕೆ ರಾಹುಕಾಲ ನೋಡಿರಬೇಕು, ಕಾಲಾಯ ತಸ್ಮೈ ನಮಃ’ ಎಂದು ಛೇಡಿಸಿದರು.

‘ನನಗೆ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ ಎಲ್ಲವೂ ಒಂದೇ. ಇವುಗಳನ್ನು ನಂಬುವುದಿಲ್ಲ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಶಲ್ಯದ ಬೆಲೆ ₹13,500’

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರೇಷ್ಮೆ ಶಲ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಶಾಲಿನ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.

ಬಿಜೆಪಿಯ ವಿ.ಸುನಿಲ್ಕುಮಾರ್ ಅವರು, ‘ನೀವು ಶಾಲು ಹಾಕಿದ ಬಳಿಕವೇ ಮುಖ್ಯಮಂತ್ರಿ ಆಗಿದ್ದು. ಅದಕ್ಕಾಗಿ ಶಿವಕುಮಾರ್ ಅವರೂ ನಿಮ್ಮನ್ನು ನೋಡಿ ಶಾಲು ಹಾಕುತ್ತಿದ್ದಾರೆ’ ಎಂದು ಕಿಚಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಸ್ಥಾನ ಸಿಗುವುದಕ್ಕೆ ಮೊದಲಿಂದಲೂ ಶಲ್ಯ ಹಾಕುತ್ತಿದ್ದೇನೆ. ಹಿಂದೆ ಹೆಗಲಿನ ಒಂದು ಬದಿ ಟವೆಲ್ ಹಾಕುತ್ತಿದ್ದೆ. ಈಗ ಜಿ.ಟಿ.ದೇವೇಗೌಡ ಹಾಕುತ್ತಾನಲ್ಲ ಆ ರೀತಿಯದು. ಆದರೆ ಬಗ್ಗಿದಾಗ ಯಾವಾಗಲೂ ಬಿದ್ದು ಹೋಗುತ್ತಿತ್ತು. ಅದಕ್ಕಾಗಿ ರೇಷ್ಮೆ ಶಲ್ಯ ಹಾಕಲು ಆರಂಭಿಸಿದೆ’ ಎಂದರು.

‘ನಾನು ಹಾಕಿರೋದು ದುಬಾರಿ ಶಾಲು, ಪ್ಯೂರ್ ಸಿಲ್ಕ್’ ಎಂದ ಅವರು ಶಲ್ಯದ ಎರಡೂ ಬದಿ ಹಿಡಿದು ಜಗುತ್ತಾ, ‘ಇದು ನನ್ನ ಭಕ್ತಿ’ ಎಂದರು. ಶಿವಕುಮಾರ್ ಅವರು, ‘ಅದರ ಬೆಲೆ ₹13,500’ ಎಂದು ಹೇಳಿದರು. ‘ಹೌದು’ ಎಂದು ಸಿದ್ದರಾಮಯ್ಯ ಒಪ್ಪಿಕೊಂಡರು.

‘ಯುಗಾದಿ, ಶಿವರಾತ್ರಿಲೂ ಮಾಂಸ ತಿನ್ನುವೆ’

‘ನಾನು ಯುಗಾದಿ, ಶಿವರಾತ್ರಿಯಲ್ಲೂ ಮಾಂಸ ತಿನ್ನುತ್ತೇನೆ. ನೀವು ಯುಗಾದಿ, ಶಿವರಾತ್ರಿ ದಿನ ಮಾಂಸ ತಿನ್ನುತ್ತೀರಾ? ನಾನು ತಿಂದಿದ್ದೇನೆ. ನೀವು ಹಬ್ಬ ಹರಿದಿನ ಅಂತ ನೋಡುತ್ತೀರಿ’ ಎಂದು ಅಶೋಕ ಅವರನ್ನು ಉದ್ದೇಶಿಸಿ ಸಿದ್ದರಾಮಯ್ಯ ಹೇಳಿದರು.

‘ದೇವರಿದ್ದಾನೆ ಎನ್ನುವುದನ್ನು ನಂಬುತ್ತೇನೆ. ಆದರೆ, ದೇವಸ್ಥಾನದಲ್ಲೇ ದೇವರಿದ್ದಾನೆ ಅಂತ ನಾನು ನಂಬಿಲ್ಲ. ಎಲ್ಲಾ ಕಡೆ ದೇವರಿದ್ದಾನೆ ಎನ್ನೋದೆ ನನ್ನ ನಂಬಿಕೆ. ಬಸವಣ್ಣ ಅವರು ಹೇಳಿದಂತೆ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ, ನಾನೇನು ಮಾಡಲಿ ಬಡವನಯ್ಯ... ಎಂಬುದರ ಮೇಲೆ ನಂಬಿಕೆ ಇಟ್ಟವನು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.