ಬೆಂಗಳೂರು: ‘ಕೇಂದ್ರದ ಅಸಹಕಾರ, ಮಲತಾಯಿ ಧೋರಣೆ ನಡುವೆಯೂ ಬಜೆಟ್ನಲ್ಲಿ ವಿತ್ತೀಯ ಶಿಸ್ತು ಪಾಲಿಸಿ, ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಎಸ್ಟಿ ಜಾರಿಗೆ ಬಂದು ಎಂಟು ವರ್ಷಗಳ ನಂತರ ಪರಿಷ್ಕರಣೆ ಮಾಡಿದರು. ಶೇ 10ರಷ್ಟಿದ್ದ ರಾಜ್ಯದ ತೆರಿಗೆ ಸಂಗ್ರಹಣೆ ಶೇ 4ಕ್ಕೆ ಇಳಿದಿದೆ. ಕೇಂದ್ರದ ಹೊಸ ನೀತಿಯಿಂದ ಕರ್ನಾಟಕಕ್ಕೆ ಸುಮಾರು ₹ 10 ಸಾವಿರ ಕೋಟಿ ನಷ್ಟವಾಗಿದೆ. ಮುಂದಿನ ವರ್ಷ ₹15 ಸಾವಿರ ಕೋಟಿ ನಷ್ಟವಾಗಲಿದೆ ಎಂದರು.

‘ಕೇಂದ್ರ ಮತ್ತು ರಾಜ್ಯದ ಪಾಲಿನ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಸಂಪೂರ್ಣ ಪಾಲು ನೀಡಿದರೂ ಕೇಂದ್ರದ ಪಾಲು ಸರಿಯಾಗಿ ಸಿಗುತ್ತಿಲ್ಲ. ಉದಾಹರಣೆಗೆ ಜಲಜೀವನ್ ಮಿಷನ್ನ ಯೋಜನಾ ವೆಚ್ಚ ₹69,488 ಕೋಟಿ. ಕೇಂದ್ರದ ಪಾಲು ₹30,880 ಕೋಟಿ. ಈವರೆಗೆ ದೊರೆತಿರುವುದು ₹11,786 ಕೋಟಿ ಮಾತ್ರ. ರಾಜ್ಯ ಸರ್ಕಾರ₹ 38,600 ಕೋಟಿ ವೆಚ್ಚ ಮಾಡಿದೆ. ₹15,500 ಕೋಟಿ ಹೆಚ್ಚುವರಿಯಾಗಿ ವೆಚ್ಚ ಮಾಡಿದ್ದೇವೆ. ಪ್ರತಿ ಯೋಜನೆಯಲ್ಲೂ ಕೇಂದ್ರ ಸರ್ಕಾರ ಇದೇ ರೀತಿ ನಡೆದುಕೊಳ್ಳುತ್ತಿದೆ. ಇದರಿಂದ ರಾಜ್ಯ ಬಜೆಟ್ ಮೇಲೆ ಪರಿಣಾಮ ಬೀರಿದೆ’ ಎಂದು ದೂರಿದರು.

‘ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ₹ 52 ಸಾವಿರ ಕೋಟಿ ಕೊಟ್ಟಿದ್ದೇವೆ. ಇಲ್ಲಿಯವರೆಗೆ ₹1.21 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. 2023-24ರಿಂದ ಮೂರು ವರ್ಷವೂ ಆರ್ಥಿಕ ಶಿಸ್ತು ಕಾಯ್ದೆಯ ಮಾನದಂಡಗಳ ಪಾಲನೆ ಮಾಡಲಾಗಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದ ಸಾಲ ₹165 ಲಕ್ಷ ಕೋಟಿಯಾಗಿದೆ. ಒಟ್ಟು ಸಾಲ ₹218 ಲಕ್ಷ ಕೋಟಿ ಇದೆ. ಕೇಂದ್ರವನ್ನು ಪ್ರಶ್ನಿಸದ ಬಿಜೆಪಿ ನಾಯಕರಿಗೆ ರಾಜ್ಯದ ಬಗ್ಗೆ ಟೀಕೆ ಮಾಡಲು ಯಾವ ನೈತಿಕತೆ ಇದೆ. ಸಾಲ ಮಾಡದೆ ಯಾವ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ, ಸಾಲ ಮಾನದಂಡಗಳ ಮಿತಿಯಲ್ಲಿರಬೇಕು. ಅದನ್ನು ಪ್ರತಿ ಬಜೆಟ್ನಲ್ಲೂ ಪಾಲಿಸಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ವಿಬಿ ಜಿ ರಾಮ್ ಜಿ ಕಾಯ್ದೆ ರದ್ದು ಮಾಡಿ ನರೇಗಾ ಜಾರಿ ಮಾಡಿದರೆ ರಾಜ್ಯಕ್ಕೆ ₹3 ಸಾವಿರ ಕೋಟಿ ಹೊರೆ ಬೀಳಲಿದೆ. ಪೂರಕ ಬಜೆಟ್ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಹೆಚ್ಚುವರಿ ಹಣವನ್ನು ಒದಗಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.