ಟೆಹರಾನ್: ಅಮೆರಿಕ, ಇಸ್ರೇಲ್ ಸೇರಿ ಮಾಡಿದ ಯುದ್ಧದಿಂದಾಗಿ ಇರಾನ್ನಲ್ಲಿ ಆಡಳಿತ ಬದಲಾವಣೆಯಾಗಿದ್ದು, ಕದನ ವಿರಾಮ ಒಪ್ಪಂದ ಶೀಘ್ರವೇ ಏರ್ಪಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.
.ಇರಾನ್ ಜೊತೆ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ: ಡೊನಾಲ್ಡ್ ಟ್ರಂಪ್.
ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ಸಾವಿಗೀಡಾದ ಇರಾನ್ನ ನಾಯಕರನ್ನು ಪಟ್ಟಿ ಮಾಡಿದ ಅವರು, ನಾಯಕತ್ವ ಬದಲಾವಣೆ ಮಾಡುವ ನಮ್ಮ ಗುರಿ ಈಡೇರಿದೆ. ಹೊಸ ನಾಯಕತ್ವ ‘ಹೆಚ್ಚು ತರ್ಕಬದ್ಧವಾಗಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ರಾತ್ರಿ ಏರ್ಫೋರ್ಸ್ ಒನ್ ವಿಮಾನದಲ್ಲಿ ವಾಷಿಂಗ್ಟನ್ಗೆ ಪ್ರಯಾಣಿಸುತ್ತಿದ್ದಾಗ ಅವರು ವರದಿಗಾರರೊಂದಿಗೆ ಮಾತನಾಡಿದ್ದಾರೆ.

‘ಆಡಳಿತ ಬದಲಾವಣೆಯ ಗುರಿ ಸಾಧಿಸಿದ್ದೇವೆ. ನಾವು ಈ ಹಿಂದೆ ಮಾತಯುಕತೆ ನಡೆಸದ ವ್ಯಕ್ತಿಗಳೊಂದಿಗೆ ವ್ಯವಹರಿಸುತ್ತಿದ್ದೇವೆ. ಇದು ಸಂಪೂರ್ಣ ವಿಭಿನ್ನವಾದ ಜನರ ಗುಂಪು. ಆದ್ದರಿಂದ ನಾನು ಇದನ್ನು ಆಡಳಿತ ಬದಲಾವಣೆ ಎಂದೇ ಪರಿಗಣಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.
.No Kings Day: ಟ್ರಂಪ್ ವಿರುದ್ಧ ಯುರೋಪ್, ಅಮೆರಿಕದಾದ್ಯಂತ ಪ್ರತಿಭಟನೆ.
ಮುಂದಿನ ವಾರದಲ್ಲಿ ಇರಾನ್ನೊಂದಿಗೆ ಕದನ ವಿರಾಮ ಒಪ್ಪಂದ ಏರ್ಪಡಲಿದೆಯೇ ಎನ್ನುವ ಪ್ರಶ್ನೆಗೆ, ‘ಇರಾನ್ನಲ್ಲಿ ಒಪ್ಪಂದ ನಡೆಯತ್ತಿದೆ. ಶೀಘ್ರವೇ ಮುಗಿಯಲಿದೆ’ ಎಂದು ಹೇಳಿದ್ದಾರೆ.

(ನ್ಯೂಯಾರ್ಕ್ ಟೈಮ್ಸ್, ಬಿಬಿಸಿ, ಎಪಿ ವರದಿ)
.ಅಮೆರಿಕಕ್ಕೆ ಹೊರ್ಮುಜ್ ಬಿಟ್ಟುಕೊಟ್ಟಿತೇ ಇರಾನ್? ಮತ್ತೆ 'ದಾಳ' ಉರುಳಿಸಿದ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.