ದುಬೈ: ಅಮೆರಿಕದ ಕದನ ವಿರಾಮ ಒಪ್ಪಂದದ ಪ್ರಸ್ತಾವ ವನ್ನು ತಿರಸ್ಕರಿಸಿರುವ ಇರಾನ್, ಇಸ್ರೇಲ್ ಮತ್ತು ಪಶ್ಚಿಮ ಏಷ್ಯಾ ದೇಶಗಳ ಮೇಲೆ ಬುಧವಾರ ಭಾರಿ ದಾಳಿ ನಡೆಸಿದೆ.

‘ಅಮೆರಿಕದ ಒಪ್ಪಂದದ ಪ್ರಸ್ತಾವವನ್ನು ಇರಾನ್ ತಿರಸ್ಕರಿಸಿದೆ. ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು ಎನ್ನುವುದನ್ನು ಇರಾನ್ ನಿರ್ಧರಿಸಲಿದೆ. ಅಮೆರಿಕದ ಪ್ರಸ್ತಾವಕ್ಕೆ ಬದಲಾಗಿ ಪ್ರತಿ ಒಪ್ಪಂದದ ಪ್ರಸ್ತಾವವನ್ನು ಸಿದ್ಧಪಡಿಸಿದೆ’ ಎಂದು ಅಲ್ಲಿನ ಸರ್ಕಾರಿ ಸುದ್ದಿ ವಾಹಿನಿ ಪ್ರೆಸ್ ಟಿವಿ ವರದಿ ಮಾಡಿದೆ.

‘ಇರಾನ್ ತನ್ನ ಕ್ಷಿಪಣಿ ಯೋಜನೆಗಳ ಬಗ್ಗೆ ಚರ್ಚಿಸುವುದಿಲ್ಲ, ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣದ ಬಗ್ಗೆ ಮಾತುಕತೆ ನಡೆಸಲು ಬಯಸುವುದಿಲ್ಲ’ ಎಂದು ಪ್ರೆಸ್ ಟಿವಿ ವರದಿ ಹೇಳಿದೆ.

ಶುಕ್ರವಾರದ ಒಳಗೆ, ಪಾಕಿಸ್ತಾನದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನೇರ ಮಾತುಕತೆಗೆ ಮಧ್ಯಸ್ಥಿಕೆದಾರರು ಪ್ರಯತ್ನಿಸುತ್ತಿದ್ದಾರೆ ಎಂದು ಈಜಿಪ್ಟ್ ಮತ್ತು ಪಾಕಿಸ್ತಾನದ ಅಧಿಕಾರಿಗಳಿಬ್ಬರು ಹೇಳಿದ್ದಾರೆ.

ಗೇಲಿ ಮಾಡಿದ ಇರಾನ್ ಸೇನೆ

‘ನಿಮ್ಮ ಸೋಲನ್ನು ಕದನ ವಿರಾಮ ಒಪ್ಪಂದ ಎಂದು ಕರೆಯಬೇಡಿ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗೇಲಿ ಮಾಡಿರುವ ಇರಾನ್ ಸೇನೆ, ‘ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆದೇ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ 15 ಅಂಶಗಳ ಯೋಜನೆಯೊಂದಿಗೆ ಅಮೆರಿಕದ ಅಧಿಕಾರಿಗಳು ಇರಾನ್ ಜತೆಗೆ ಮಾತುಕತೆ ನಡೆಸಿದ್ದಾರೆ’ ಎಂಬ ಟ್ರಂಪ್ ಹೇಳಿಕೆಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಯುದ್ಧ ಆರಂಭಗೊಂಡ ಮೊದಲ ದಿನದಿಂದಲೂ ನಮ್ಮ ಮೊದಲ ಮತ್ತು ಕೊನೆಯ ಮಾತು ಒಂದೇ ಆಗಿದೆ. ಮುಂದೆಯೂ ಅದು ಹಾಗೆಯೇ ಇರುತ್ತದೆ. ನಮ್ಮಂಥವರು ನಿಮ್ಮ ತರಹದ ದೇಶದೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈಗ ಮಾತ್ರವಲ್ಲ, ಮುಂದೆಂದೂ ಇಲ್ಲ’ ಎಂದು ಇರಾನ್ ಸೇನೆಯ ವಕ್ತಾರ ಇಬ್ರಾಹಿಂ ಜೋಲ್ಫಾಘರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.