ಇಸ್ಲಾಮಾಬಾದ್: ಇರಾನ್ ಜೊತೆಗಿನ ಕದನ ವಿರಾಮ ಮಾತುಕತೆಗಳು ಯಾವುದೇ ಒಪ್ಪಂದವನ್ನು ತಲುಪುವಲ್ಲಿ ವಿಫಲವಾಗಿವೆ ಎಂದು ತಿಳಿಸಿದ ಬೆನ್ನಲ್ಲೇ, ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರು ಭಾನುವಾರ ಪಾಕಿಸ್ತಾನದಿಂದ ನಿರ್ಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ.
.ಅಮೆರಿಕ-ಇರಾನ್ ಕದನ ವಿರಾಮ ಮಾತುಕತೆ: ಮೂಡದ ಒಮ್ಮತ, ನಡೆಯದ ಒಪ್ಪಂದ.
ಬೆಳಿಗ್ಗೆ 7:08ಕ್ಕೆ (ಪಾಕಿಸ್ತಾನ ಸಮಯ) ‘ಏರ್ ಫೋರ್ಸ್ ಟು’ ವಿಮಾನ ಏರಿದ ವ್ಯಾನ್ಸ್, ಮೆಟ್ಟಿಲುಗಳಲ್ಲಿ ನಿಂತು ಪಾಕಿಸ್ತಾನಿ ಅಧಿಕಾರಿಗಳತ್ತ ಕೈಬೀಸಿದರು ಎಂದು ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮೆರಿಕದ ಅಸಮಂಜಸ ಬೇಡಿಕೆಗಳಿಂದ ಮಾತುಕತೆ ವಿಫಲಗೊಂಡಿವೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಐಬಿ ಭಾನುವಾರ ತಿಳಿಸಿದೆ.

‘ಇರಾನ್ ಜನರ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ನಿಯೋಗವು 21 ಗಂಟೆಗಳ ನಿರಂತರ ಮತ್ತು ತೀವ್ರವಾದ ಮಾತುಕತೆ ನಡೆಸಿತು. ಇರಾನ್ ನಿಯೋಗವು ಹಲವಾರು ಉಪಕ್ರಮಗಳನ್ನು ಮುಂದಿಟ್ಟಿದ್ದರೂ ಸಹ, ಅಮೆರಿಕದ ಅಸಮಂಜಸ ಬೇಡಿಕೆಗಳು ಮಾತುಕತೆಯ ಪ್ರಗತಿಯನ್ನು ತಡೆದವು. ಹೀಗಾಗಿ ಸಂಧಾನ ಪ್ರಕ್ರಿಯೆಯು ಅಂತ್ಯಗೊಂಡಿತು’ ಎಂದು ಐಆರ್‌ಐಬಿ ತನ್ನ ಟೆಲಿಗ್ರಾಮ್ ಖಾತೆಯಲ್ಲಿ ತಿಳಿಸಿದೆ.

(ಎಎಫ್ಪಿ ವರದಿ)
.ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಮೆರಿಕ-ಇರಾನ್ ಮಾತುಕತೆಯ ಪ್ರಮುಖ ವಿಷಯಗಳೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.