ನವದೆಹಲಿ: ಭಾರತ ಮೂಲದ ಕೆನಡಿಯನ್–ಅಮೆರಿಕನ್ ಬರಹಗಾರ್ತಿ ಪದ್ಮಾ ವಿಶ್ವನಾಥನ್ ಅವರು ಪೋರ್ಚುಗೀಸ್ ಭಾಷೆಯ ಕಾದಂಬರಿಯನ್ನು ಇಂಗ್ಲಿಷ್ಗೆ ಅನುವಾದ ಮಾಡಿದ್ದಕ್ಕಾಗಿ 2026ರ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.

ಬ್ರೆಜಿಲ್ ಲೇಖಕಿ ಅನಾ ಪೌಲಾ ಮೈಯಾ ಅವರು ಪೊರ್ಚುಗೀಸ್ ಭಾಷೆಯಲ್ಲಿ ರಚಿಸಿರುವ ‘ಆನ್ ಅರ್ಥ್ ಆ್ಯಸ್ ಇಟ್ ಈಸ್ ಬಿನೀತ್’ ಕಾದಂಬರಿಯನ್ನು ಪದ್ಮಾ ಅವರು ಇಂಗ್ಲಿಷ್ಗೆ ಅನುವಾದಿಸಿದ್ದಾರೆ.

ಅಂತಿಮ ಪಟ್ಟಿಯಲ್ಲಿರುವ ಆರು ಪುಸ್ತಕಗಳನ್ನು ಮಂಗಳವಾರ ಘೋಷಿಸಲಾಯಿತು. ಇದರಲ್ಲಿ ಮಹಿಳೆಯರೇ ಪ್ರಾಬಲ್ಯ ಸಾಧಿಸಿದ್ದು, ಆರು ಸಾಹಿತಿಗಳಲ್ಲಿ ಐವರು ಹಾಗೂ ಅನುವಾದಕರಲ್ಲಿ 4 ಮಂದಿ ಮಹಿಳೆಯರೇ ಆಗಿದ್ದಾರೆ.

ಅಂತಿಮ ಪಟ್ಟಿಯಲ್ಲಿರುವ ಎಲ್ಲಾ ಆರೂ ಪುಸ್ತಕಗಳ ಕೃತಿಕಾರರು ಹಾಗೂ ಇಂಗ್ಲಿಷ್ ಅನುವಾದಕರಿಗೆ ತಲಾ ₹6.14 ಲಕ್ಷವನ್ನು ನೀಡಲಾಗುತ್ತದೆ. ಇದು ಲೇಖಕ ಹಾಗೂ ಅನುವಾದಕರಿಗೆ ಸಮವಾಗಿ ಹಂಚಿಕೆಯಾಗುತ್ತದೆ.

ಲಂಡನ್ನ ಟೇಟ್ ಮಾಡರ್ನ್ನಲ್ಲಿ ಮೇ 9ರಂದು ನಡೆಯುವ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.

ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಕಥಾ ಸಂಕಲನದ ಇಂಗ್ಲಿಷ್ ಅನುವಾದಕ್ಕೆ ದೀಪಾ ಭಾಸ್ತಿ ಅವರಿಗೆ 2025ರ ‘ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ’ ಒಲಿದು ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.