ವಾಷಿಂಗ್ಟನ್: ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಗೆ ತಡೆ ಹಾಕುವ ಮೂಲಕ ಇರಾನ್ ತೈಲ ಸರಬರಾಜನ್ನು ನಿಲ್ಲಿಸಿದರೆ ಅಮೆರಿಕವು ಇರಾನ್ ಮೇಲೆ ಇನ್ನಷ್ಟು ಕಠಿಣ ದಾಳಿ ನಡೆಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

‘ಹೊರ್ಮುಜ್ ಜಲಸಂಧಿ ಮೂಲಕ ತೈಲ ಸರಬರಾಜನ್ನು ನಿಲ್ಲಿಸುವ ಯಾವುದೇ ಯತ್ನವನ್ನು ಇರಾನ್ ಮಾಡಿದರೆ, ಅವರು ಇಲ್ಲಿಯವರೆಗೆ ಎದುರಿಸಿದ್ದ ದಾಳಿಗಿಂತ ಇಪ್ಪತ್ತು ಪಟ್ಟು ಹೆಚ್ಚು ಕಠಿಣ ದಾಳಿಯನ್ನು ಅಮೆರಿಕದಿಂದ ಎದುರಿಸಬೇಕಾಗುತ್ತದೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

‘ಇರಾನ್ ಅನ್ನು ಮತ್ತೆ ಒಂದು ರಾಷ್ಟ್ರವಾಗಿ ಮರು ನಿರ್ಮಾಣ ಮಾಡಲಾಗದಷ್ಟರಮಟ್ಟಿಗೆ ಸುಲಭವಾಗಿ ನಾಶಪಡಿಸುತ್ತೇವೆ. ಸಾವು ನೋವು, ಬೆಂಕಿ ಮತ್ತು ಭೀಕರತೆ ತಾಂಡವವಾಡುತ್ತದೆ. ಹಾಗಾಗದಿರಲಿ ಎಂಬುದು ನಮ್ಮ ಆಶಯ. ಅದಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.

ತೈಲ ಪೂರೈಕೆಗಾಗಿ ಈ ಮಾರ್ಗವನ್ನು ಹೆಚ್ಚು ಅವಲಂಬಿಸಿರುವ ದೇಶಗಳಿಗೆ ಜಲಸಂಧಿಯ ಮೂಲಕ ಹಡಗು ಸಾಗಣೆಗೆ ಅನುವು ಮಾಡಿಕೊಡಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ.

‘ಚೀನಾ ಸೇರಿದಂತೆ ಹೊರ್ಮುಜ್ ಜಲಸಂಧಿ ಮೇಲೆ ಹೆಚ್ಚು ಅವಲಂಬಿತವಾಗಿರರುವ ದೇಶಗಳಿಗೆ ಇದು ಅಮೆರಿಕದ ಉಡುಗೊರೆ. ಈ ನಮ್ಮ ನಡೆಯು ಅತ್ಯಂತ ಪ್ರಶಂಸನೀಯವಾದದ್ದು’ ಎಂದಿದ್ದಾರೆ.

ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಯುದ್ಧದ ನಡುವೆ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಈ ಎಚ್ಚರಿಕೆ ಬಂದಿದೆ.

ಇದಕ್ಕೂ ಮುನ್ನ, ಗಲ್ಫ್ ದೇಶಗಳಿಂದ ಗಮನಾರ್ಹ ಪ್ರಮಾಣದಲ್ಲಿ ಕಚ್ಚಾ ತೈಲ ರಫ್ತಾಗುವ ಇರಾನ್ ಮತ್ತು ಒಮಾನ್ ನಡುವಿನ ಜಲಮಾರ್ಗದ ಮಾರ್ಗವನ್ನು ಸುರಕ್ಷಿತಗೊಳಿಸಲು ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಟ್ರಂಪ್ ಸೂಚಿಸಿದ್ದರು.

ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ಮೂಲಕ ಇರಾನ್ ದಿನಕ್ಕೆ ಸುಮಾರು 20 ಮಿಲಿಯನ್ ಬ್ಯಾರಲ್ ತೈಲಕ್ಕೆ ಅಡ್ಡಿಯುಂಟುಮಾಡಿದ ನಂತರ, ಟ್ರಂಪ್ ಅವರ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಆಧುನಿಕ ಇತಿಹಾಸದಲ್ಲಿ ಅತಿದೊಡ್ಡ ತೈಲ ಪೂರೈಕೆ ಆಘಾತ ಎಂದು ವಿಶ್ಲೇಷಕರು ಕರೆಯುವುದನ್ನು ಪ್ರಚೋದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.