2026ರ ಐಪಿಎಲ್ ಟೂರ್ನಿಯಲ್ಲಿ ಆಟಗಾರರು ಗೆಳತಿಯರೊಂದಿಗೆ ಮೈದಾನದಲ್ಲಿ ಸಲುಗೆಯಿಂದ ಕಾಣಿಸಿಕೊಳ್ಳುತ್ತಿರುವುದು, ತಂಡದ ಬಸ್ಗಳನ್ನು ಗೆಳತಿಯರಿಗಾಗಿ ಕಾಯಿಸುವುದು ಕಂಡುಬಂದಿದ್ದು, ಆಟಗಾರರ ಈ ನಡೆಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿದೆ.

ವರದಿಗಳ ಪ್ರಕಾರ ಐಪಿಎಲ್ ಪಂದ್ಯಗಳಲ್ಲಿ ಕೆಲ ಆಟಗಾರರು ಗೆಳತಿಯರೊಂದಿಗೆ ಮೈದಾನದಲ್ಲಿ ಅನುಚಿತ ವರ್ತನೆಯನ್ನು ತೋರುತ್ತಿರುವುದು, ತಂಡವು ಪ್ರಯಾಣಿಸಲು ಇರುವ ಬಸ್ಗಳಲ್ಲಿ ಒಟ್ಟಿಗೆ ಪ್ರಯಾಣಿಸುವುದು ಸಮಂಜಸವಲ್ಲ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಸಿಸಿಐನ ನಿಯಮದ ಪ್ರಕಾರ ಆಟಗಾರರ ಕುಟುಂಬಸ್ಥರಿಗೆ ಮಾತ್ರ ಕೆಲ ವಿನಾಯಿತಿ ಇದೆ. ಈ ರೀತಿ ಗೆಳತಿಯರೊಂದಿಗೆ ಮೈದಾನದಲ್ಲಿ ವರ್ತಿಸುವುದನ್ನು ಯಾರು ಅಧೀಕೃತಗೊಳಿಸಿದ್ದಾರೆ? ಎಂದು ತನಿಖೆ ಮಾಡಬೇಕಿದೆ’ ಎಂದಿದ್ದಾರೆ.

ಇದರಿಂದ ಕೆಲ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳಿದ್ದು, ಕ್ರೀಡೆಯ ವಿಶ್ವಾಸಾರ್ಹತೆಗೆ ಅಪಾಯ ಉಂಟು ಮಾಡಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲದೆ ಬಿಸಿಸಿಐ ತನ್ನ ಮುಂದಿನ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಮತ್ತು ಲೀಗ್ನಲ್ಲಿ ಈ ಕುರಿತು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ತರಲು ನಿರ್ಧರಿಸಿದೆ.

ಹಾರ್ದಿಕ್ ಪಾಂಡ್ಯ , ಯಶಸ್ವಿ ಜೈಸ್ವಾಲ್ , ಇಶಾನ್ ಕಿಶನ್ ಮತ್ತು ಅರ್ಶದೀಪ್ ಸಿಂಗ್ ಅವರು ಪಂದ್ಯದ ಸಂದರ್ಭದಲ್ಲಿ ತಮ್ಮ ಗೆಳತಿಯರೊಂದಿಗೆ ಕಾಣಿಸಿಕೊಂಡಿದ್ದರು. ಜಾರಿಯಾಗುವ ಹೊಸ ನಿಯಮಗಳು ಐಪಿಎಲ್ ಮಾತ್ರವಲ್ಲದೆ, ಭಾರತದ ರಾಷ್ಟ್ರೀಯ ತಂಡಕ್ಕೂ ಅನ್ವಯವಾಗುತ್ತದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.