ನವದೆಹಲಿ (ಪಿಟಿಐ): ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಬಹುತೇಕ ಎಲ್ಲ ತಂಡಗಳ ನಾಯಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2023ರಿಂದ ಜಾರಿಯಾಗಿರುವ ಈ ನಿಯಮದ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಲೇ ಇವೆ. ಆದರೂ 2024ರಲ್ಲಿ ಮತ್ತೆ ಅದನ್ನು ವಿಸ್ತರಿಸಲಾಯಿತು. ಈ ವರ್ಷದ ಟೂರ್ನಿಯಲ್ಲಿಯೂ ಇರಲಿದೆ. ಬುಧವಾರ ಮುಂಬೈನಲ್ಲಿ ನಡೆದ ಐಪಿಎಲ್ ನಾಯಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.

‘10 ತಂಡಗಳ ನಾಯಕರು ಭಾಗವಹಿಸಿದ್ದರು. ಬಹುತೇಕ ಎಲ್ಲರೂ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. 2027ರ ಆವೃತ್ತಿಯಲ್ಲಿಯಾದರೂ ನಿಯಮದ ವಿಶ್ಲೇಷಣೆ ನಡೆಯಬೇಕು ಎಂಬ ಆಗ್ರಹ ಕೇಳಿಬಂತು’ ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ಈಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೆಲ್ ಅವರು ಕೂಡ ಈ ನಿಯಮವನ್ನು ಟೀಕಿಸಿದ್ದರು. ಈ ಹಿಂದೆ ರೋಹಿತ್ ಶರ್ಮಾ ಕೂಡ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

‘ನಾನೊಬ್ಬ ಆಲ್ರೌಂಡರ್ ಆಗಿರುವೆ. ಆದರೆ ಈ ನಿಯಮ ನನಗೆ ಇಷ್ಟವಿಲ್ಲ. ಮೊದಲಿಗೆ ತಂಡಗಳು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಲ್ರೌಂಡರ್ಗಳನ್ನೇ ಆಯ್ಕೆ ಮಾಡುತ್ತಿದ್ದವು. ಕ್ರಮೇಣ ಫ್ರ್ಯಾಂಚೈಸಿಗಳು ಇಂಪ್ಯಾಕ್ಟ್ ನಿಯಮದಲ್ಲಿ ಬ್ಯಾಟರ್ ಅಥವಾ ಬೌಲರ್ಗಳನ್ನೇ ಕಣಕ್ಕಿಳಿಸುತ್ತಿವೆ. ಆಲ್ರೌಂಡರ್ ಬೇಕಿಲ್ಲವೆಂದು ಹೇಳುತ್ತಿವೆ’ ಎಂದು ಅಕ್ಷರ್ ಹೇಳಿದ್ದರು.

ವಿದೇಶಿ ಆಟಗಾರ ಗ್ಲೆನ್ ಫಿಲಿಪ್ಸ್ ಅವರೂ ಈ ಹಿಂದೆ, ‘ಈ ನಿಯಮವು ಆಲ್ರೌಂಡರ್ಗಳಿಗೆ ಮಾರಕವಾಗಲಿದೆ’ ಎಂದಿದ್ದರು.

ಸಭೆಯಲ್ಲಿದ್ದ ನಾಯಕರು ಮೊದಲ ಇನಿಂಗ್ಸ್ನಲ್ಲಿ 10 ಓವರ್ಗಳ ಚೆಂಡು ಬದಲಾವಣೆ ಮಾಡುವ ನಿಯಮ ಬೇಕು ಎಂದು ಹೇಳಿದರು.

ಕಳೆದ ಋತುವಿನಲ್ಲಿ ಎರಡನೇ ಇನಿಂಗ್ಸ್ನಲ್ಲಿ 10ನೇ ಓವರ್ ನಂತರ ಚೆಂಡು ಬದಲಾಯಿಸಿಕೊಳ್ಳಲು ಅನುವು ಮಾಡಿಕೊಡಲಾಗಿತ್ತು. ಇಬ್ಬನಿಯಿಂದ ಚೆಂಡು ಒದ್ದೆಯಾಗುತ್ತದೆ. ಈ ಸಮಸ್ಯೆಯನ್ನು ನಿರ್ವಹಿಸಲು ನಿಯಮ ಜಾರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.