ನವದೆಹಲಿ: ಭಾರತ ಮೂಲದ ಬೋಧನ ಶಿವಾನಂದನ್, ಕೇವಲ 11 ವರ್ಷಕ್ಕೆ ಇಂಗ್ಲೆಂಡ್ನ ನಂ.1 ಮಹಿಳಾ ಚೆಸ್ ಆಟಗಾರ್ತಿಯಾಗಿದ್ದಾರೆ.

ಅಂತರರಾಷ್ಟ್ರೀಯ ಚೆಸ್ ಫೆಡರೇಷನ್(ಫಿಡೆ) ಇತ್ತೀಚೆಗೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅವರು 2366 ರೇಟಿಂಗ್ ಪಾಯಿಂಟ್ ಹೊಂದಿದ್ದಾರೆ.

ತಮಿಳುನಾಡಿನ ತಿರುಚಿರಾಪಳ್ಳಿ ಮೂಲದ ಅವರ ಪೋಷಕರು, 2007ರಲ್ಲಿ ಇಂಗ್ಲೆಂಡ್ಗೆ ತೆರಳಿದ್ದರು. ಉತ್ತರ ಲಂಡನ್ನ ಹ್ಯಾರೋ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬೋಧನ ಶಿವಾನಂದನ್, 11ನೇ ವರ್ಷದಲ್ಲೇ 4 ಬಾರಿಯ ಬ್ರಿಟಿಷ್ ಮಹಿಳಾ ಚಾಂಪಿಯನ್ ಆಗಿರುವ 25 ವರ್ಷದ ಲ್ಯಾನ್ ಯಾವೋ ಅವರನ್ನು ಫಿಡೆ ರ್ಯಾಂಕಿಂಗ್ನಲ್ಲಿ ಹಿಂದಿಕ್ಕಿದ್ದಾರೆ.

ಈ ಮೂಲಕ ಇದೇ ಮೊದಲ ಬಾರಿಗೆ ವಿಶ್ವದ ಟಾಪ್–100 ಮಹಿಳಾ ಆಟಗಾರ್ತಿಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, 72ನೇ ಸ್ಥಾನದಲ್ಲಿದ್ದಾರೆ.

ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ತಂದೆಯು ಚೆಸ್ ಬೋರ್ಡ್ ಬಿಸಾಡುವಾಗ, ಅದನ್ನು ತಡೆದು ಚೆಸ್ ಆಡಲು ಶುರು ಮಾಡಿದ್ದಾಗಿ ಬೋಧನ ಶಿವಾನಂದನ್ ಹೇಳಿಕೊಂಡಿದ್ದಾರೆ. ಅವರು ಕಳೆದ ವರ್ಷ ಮಹಿಳಾ ಅಂತರರಾಷ್ಟ್ರೀಯ ಮಾಸ್ಟರ್ ಆಗಿದ್ದರು.

ಬೋಧನ ಶಿವಾನಂದನ್ ಅವರ ಸಾಧನೆಗೆ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.

‘ಇಂಗ್ಲೆಂಡ್ನ ನಂ.1 ಚೆಸ್ ಆಟಗಾರ್ತಿಯಾಗಿರುವ 11 ವರ್ಷದ ಬೋಧನ ಶಿವಾನಂದನ್ ಅವರಿಗೆ ಅಭಿನಂದನೆಗಳು. ಡೌನಿಂಗ್ ಸ್ಟ್ರೀಟ್ ಗಾರ್ಡನ್ನಲ್ಲಿರುವ ನಿವಾಸದಲ್ಲಿ ನಾವಿಬ್ಬರೂ ಒಂದು ಬಾರಿ ಚೆಸ್ ಆಡಿದ್ದೆವು’ ಎಂದು ರಿಷಿ ಸುನಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.