ಅಮೆರಿಕದ ವಾಷಿಂಗ್ಟನ್ನಲ್ಲಿರುವ ಎರಡನೇ ಮಹಾಯುದ್ಧದ ಸ್ಮಾರಕದೆದುರು ಯುವತಿಯೊಂದಿಗೆ ನೃತ್ಯ ಮಾಡಿ ವಿವಾದ ಸೃಷ್ಟಿಸಿರುವವ ಭಾರತ ಮೂಲದ ಟೆಕ್ಕಿಯೊಬ್ಬರು, ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಟೆಕ್ಕಿಯನ್ನು ಮಧು ರಾಜು ಎಂದು ಗುರುತಿಸಲಾಗಿದೆ. ಅವರು, ನ್ಯಾಷನಲ್ ಮಾಲ್ ಬಳಿ ಇರುವ ಸ್ಮಾರಕದ ಎದುರು ಯುವತಿಯ ಜೊತೆ ನೃತ್ಯ ಮಾಡಿದ್ದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ವಿಡಿಯೊ ಹರಿದಾಡುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸ್ಮಾರಕಕ್ಕೆ ಅಗೌರವ ತೋರಿದ ವ್ಯಕ್ತಿಯನ್ನು ಗಡೀಪಾರು ಮಾಡಬೇಕು ಎಂದು ನೆಟ್ಟಿಗರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎರಡನೇ ವಿಶ್ವ ಸಮರದದಲ್ಲಿ ಹೋರಾಡಿದ ಅಮೆರಿಕದ ಲಕ್ಷಾಂತರ ಮಂದಿ ಹಾಗೂ ಮಡಿದ ಯೋಧರ ಗೌರವಾರ್ಥವಾಗಿ ಈ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ವಿಡಿಯೊಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ರಾಜು ಅವರು ತಮ್ಮ ಖಾತೆಯಿಂದ ವಿಡಿಯೊ ಅಳಿಸಿ ಹಾಕಿದ್ದಾರೆ. ಲಿಂಕ್ಡ್ಇನ್ನಲ್ಲಿರುವ ಮಾಹಿತಿ ಪ್ರಕಾರ, ಅವರು ಡಲ್ಲಾಸ್ನಲ್ಲಿ ನೆಲೆಸಿದ್ದಾರೆ. ಸೈಬರ್ ಸೆಕ್ಯುರಿಟಿ ಕಂಪನಿ ಪಾಲೊ ಆಲ್ಟೊ ನೆಟ್ವರ್ಕ್ಸ್ನಲ್ಲಿ ನೌಕರಿಯಲ್ಲಿದ್ದರು ಎನ್ನಲಾಗಿದೆ.

ʼಇದು ವಾಷಿಂಗ್ಟನ್ ಡಿಸಿಯಲ್ಲಿರುವ ಯುದ್ಧ ಸ್ಮಾರಕ. ವಿಚಿತ್ರ ಟಿಕ್ಟಾಕ್ ನೃತ್ಯ ಮಾಡುವ ಸ್ಥಳವಲ್ಲ. ಅವರೆಲ್ಲ ಹಿಂತಿರುಗಬೇಕು (ತಮ್ಮ ದೇಶಕ್ಕೆ ಮರಳಬೇಕು)ʼ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ʼಅಮೆರಿಕ ಮೊದಲುʼ ನೀತಿಯು ವಲಸಿಗರಲ್ಲಿ ಆತಂಕ ಸೃಷ್ಟಿಸಿರುವ ಹೊತ್ತಿನಲ್ಲೇ ಈ ವಿಡಿಯೊ ವಿವಾದ ಸೃಷ್ಟಿಸಿದೆ.

ಕೆಲಸದಿಂದ ವಜಾ!

ಮಧು ವಿಡಿಯೊ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಾಲೊ ಆಲ್ಟೊ ನೆಟ್ವರ್ಕ್ಸ್ ಕಂಪನಿಯು, ಮಧು ಅವರನ್ನು ಕೆಲಸದಿಂದ ವಜಾ ಮಾಡಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.