‘ಹಗ್ಸ್ ನಾಟ್ ಡ್ರಗ್ಸ್' ಕಾರ್ಯಕ್ರಮ

7

‘ಹಗ್ಸ್ ನಾಟ್ ಡ್ರಗ್ಸ್' ಕಾರ್ಯಕ್ರಮ

Published:
Updated:

ಮಾದಕ ವಸ್ತುಗಳನ್ನು ಬಳಸದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ‘ಜಿ ಗ್ರೂಪ್ಸ್‌’ ಸಂಸ್ಥೆಯು ‘ಹಗ್ಸ್ ನಾಟ್ ಡ್ರಗ್ಸ್' ಅಭಿಯಾನ ಹಮ್ಮಿಕೊಂಡಿದೆ.

ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಇದರ ಉದ್ದೇಶ. ‘ಜಿ ಗ್ರೂಪ್ಸ್‌’ನ ಸಿಎಸ್‍ಆರ್ ಚಟುವಟಿಕೆಯ ಅಂಗವಾಗಿರುವ ‘ಹೆಲ್ಪಿಂಗ್ ಹಾರ್ಟ್ಸ್‌‘ ಸಂಸ್ಥೆಯು ಸಮಾಜದ ದುರ್ಬಲ ವರ್ಗಗಳಿಗೆ ‘ಪೌಷ್ಟಿಕ ಆಹಾರ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ, ಮಹಿಳಾ ಸಬಲೀಕರಣ, ಮಕ್ಕಳ ಆರೈಕೆ, ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಅದಕ್ಕೆ ಪೂರಕವಾಗಿ ‘ಹಗ್ಸ್ ನಾಟ್ ಡ್ರಗ್ಸ್' ಕಾರ್ಯವನ್ನು ಈ ಸಂಸ್ಥೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಇತ್ತೀಚೆಗೆ ಮಲ್ಲೇಶ್ವರದ ವಿದ್ಯಾಮಂದಿರ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿತ್ತು.

ವಿದ್ಯಾಮಂದಿರ ಶಾಲೆಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಕೆ.ಸಿ.ಜನರಲ್ ಆಸ್ಪತ್ರೆಯ ಡಾ. ಗಿರೀಶ್ ಕುಮಾರ್ ಅವರು, ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !