‘ಹಕ್ಕು, ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ‘

7
ಮಾನವ ಹಕ್ಕುಗಳ ದಿನಾಚರಣೆ

‘ಹಕ್ಕು, ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ‘

Published:
Updated:
Deccan Herald

ವಿಜಯಪುರ: ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನು ಹುಟ್ಟಿನಿಂದಲೇ ಹಕ್ಕುಗಳನ್ನು ಪಡೆಯುತ್ತಾನೆ. ಅವು ಉಲ್ಲಂಘನೆಯಾದಾಗ ಕಾನೂನಿನ ಚೌಕಟ್ಟಿನಲ್ಲಿ ನೆರವು ಪಡೆಯಬಹುದು ಎಂದು ಸ್ಫೂರ್ತಿ ವಿಕಲಚೇತನರ ಸಂಘದ ಅಧ್ಯಕ್ಷ ಬಾಬು ಯಂಭತ್ನಾಳ ಹೇಳಿದರು.

ತಾಲ್ಲೂಕಿನ ಆಹೇರಿ ತಾಂಡಾದಲ್ಲಿ ಸೋಮವಾರ ವರ್ಲ್ಡ್‌ ವಿಷನ್‌ ಇಂಡಿಯಾ, ಸ್ಫೂರ್ತಿ ವಿಕಲಚೇತನರ ಸಂಘ, ಸಮುದಾಯ ಕಾಳಜಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಾನವ ತನ್ನ ಇಷ್ಟದಂತೆ ಜೀವಿಸುವ, ಭಾವನೆಗಳನ್ನು ವ್ಯಕ್ತಪಡಿಸುವ, ಧರ್ಮವನ್ನು ಅನುಸರಿಸುವ ಸಮಾನ ಅವಕಾಶ ಸಂವಿಧಾನದ ಕಲ್ಪಿಸಿದೆ ಎಂದರು.

ವರ್ಲ್ಡ್‌ ವಿಷನ್ ಸಂಸ್ಥೆಯ ಜಂಬಗಿ ವಲಯದ ಸಂಯೋಜಕ ಆಸ್ಟಿನ್ ಜಯಕರ ಹನ್ಸ್ ಮಾತನಾಡಿ, ಈಚಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದು ಕಳವಳಕಾರಿ ವಿಷಯ. ಲಿಂಗ ತಾರತಮ್ಯ, ಮಕ್ಕಳ ಮಾರಾಟ, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ಮುಂತಾದ ಅನಿಷ್ಟ ಪದ್ಧತಿಗಳನ್ನು ತಡೆಯಬೇಕಿದೆ ಎಂದು ಹೇಳಿದರು.

ವಿಠ್ಠಲ ಯುವಕ ಸಂಘದ ಅಧ್ಯಕ್ಷ ಸಂಜೀವ ಜಾಧವ, ಪ್ರತಿಯೊಬ್ಬ ನಾಗರಿಕನಿಗೆ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕಿನ ಜತೆಗೆ ಕರ್ತವ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಿರ್ವಹಿಸಿದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದರು.

ಕಮಲಾ ಸ್ವಯಂ ಸಿದ್ಧಿ ಸಂಘದ ಅಧ್ಯಕ್ಷೆ ಸೋಮಿಬಾಯಿ ಜಾಧವ ಕಾರ್ಯಕ್ರಮ ಉದ್ಘಾಟಿಸಿದರು. ಗೋಪಾಲ ಜಾಧವ, ಶಿವಾನಂದ ಮೂಲಿಮನಿ, ಗಣೇಶ ರಾಠೋಡ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !