ಭಾರತದ ಏಕತೆಗಾಗಿ ಉಪವಾಸವ ಮಾಡಿ...

7

ಭಾರತದ ಏಕತೆಗಾಗಿ ಉಪವಾಸವ ಮಾಡಿ...

Published:
Updated:
Deccan Herald

ಮಹಾತ್ಮ ಗಾಂಧೀಜಿ ಕೈಗೊಂಡ ಉಪವಾಸ ಬರೀ ದೇಹಶುದ್ಧಿಗಷ್ಟೇ ಅಲ್ಲ ಮನಸಿನ ಶುದ್ಧಿಗೂ ಹೌದು. ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಅವರು ಕೈಗೊಂಡ ಉಪವಾಸ ಸತ್ಯಾಗ್ರಹದ ಅಸ್ತ್ರಕ್ಕೆ ಬ್ರಿಟಿಷರೂ ಮಣಿಯಬೇಕಾಯಿತು. ಗಾಂಧೀಜಿ ಅವರ  ಉಪವಾಸ ಸತ್ಯಾಗ್ರಹ ಇಂದಿಗೂ ಅಷ್ಟೇ ಶಕ್ತಿಶಾಲಿ. ಅದನ್ನು ಭಾರತದ ಏಕತೆಗಾಗಿ ಆಚರಿಸೋಣ ಎನ್ನುವ ಭಾವಹೊತ್ತು ಹಿರಿಯ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಆವರಣದಲ್ಲಿ ನೂರಾರು ಯುವಜನರು ಅ.6ರಂದು ಉಪವಾಸ ಸತ್ಯಾಗ್ರಹ ಆಚರಿಸಲಿದ್ದಾರೆ.

ಅಂದು ಇಡೀ ದಿನ,ಗಾಂಧೀಜಿ ಅವರ ಆಶಯಗಳನ್ನು ಧ್ವನಿಸುವ ಹಾಡುಗಳು, ನಾಟಕಗಳು, ಹಾಗೂ ಫ್ಯಾಷನ್ ಷೋ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮಸೇವಾ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸಿದೆ.

‘ಹೆಣ್ಣುಮಕ್ಕಳ ಮೇಲೆ ಹಿಂಸೆ ಹೆಚ್ಚುತ್ತಿದೆ. ಹಿಂಸೆಯನ್ನು ತಡೆಯಲು ಪ್ರತಿಹಿಂಸೆ ನಡೆಸಬೇಕಾಗಿಲ್ಲ. ಎದುರಾಳಿಯ ಒಳಗಿರುವ ಮಾನವೀಯ ಗುಣ, ತಾಯ್ತನದ ಗುಣವನ್ನು ಎಚ್ಚರಿಸುವುದೇ ನಮಗಿರುವ ದಾರಿ. ಗಾಂಧೀಜಿ ಅವರ ಆಶಯವೂ ಇದೇ ಆಗಿತ್ತು. ‘ಎಲ್ಲಿ ಹೋದವೋ ಎದೆಯ ಗೂಡಿನ ಹಕ್ಕಿಗಳು’ ಏಕವ್ಯಕ್ತಿ ಪ್ರದರ್ಶನವೂ ಈ ಆಶಯವನ್ನು ಪ್ರತಿಧ್ವನಿಸುತ್ತದೆ. 15 ನಿಮಿಷಗಳ ಈ ಪ್ರದರ್ಶನ ಗಾಂಧೀಜಿ ಮತ್ತು ಬುದ್ಧನ ಅಹಿಂಸಾ ಮಾರ್ಗದ ಆಶಯ ಹೊತ್ತಿದೆ’ ಎನ್ನುತ್ತಾರೆ ಲೇಖಕಿ ದು. ಸುರಸ್ವತಿ.

‘ಈ ಬಾರಿ ಯುವಜನರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ. ದೇಶದಲ್ಲಿ ಏನಾಗುತ್ತಿದೆ. ನಮ್ಮ ಸುತ್ತಮುತ್ತ ಸಂಭವಿಸುತ್ತಿರುವ ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆಯೂ ಯುವಜನರು ಆಸಕ್ತರಾಗಿದ್ದಾರೆ. ಅದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ’ ಎನ್ನುತ್ತಾರೆ ಸತ್ಯಾ ಗ್ರಹದಲ್ಲಿ ಪಾಲ್ಗೊಳ್ಳುತ್ತಿರುವ ಖ್ಯಾತ ಗಾಯಕ ವಾಸು ದೀಕ್ಷಿತ್.

‘ಸಂಗೀತದ ಮೂಲಕ ಸಾಮಾಜಿಕ ಸಂದೇಶ ಸಾರಬಹುದು ಎಂಬುದು ನನ್ನ ನಂಬಿಕೆ. ನಿತ್ಯ ಜೀವನದಲ್ಲಿ ನಾನು ‘ದೇಸಿ’ ಬಟ್ಟೆಗಳನ್ನೇ ಬಳಸುತ್ತೇನೆ. ಖಾದಿ ಮತ್ತು ಹತ್ತಿಯ ಉಡುಪುಗಳು ನಮ್ಮ ಸ್ವದೇಶಿ ವಾತಾವರಣಕ್ಕೆ ಪೂರಕವಾಗಿವೆ. ನಾನು ವಿದೇಶಿ ಬ್ರಾಂಡ್‌ನ ಉಡುಪುಗಳನ್ನು ಬಳಸುವುದಿಲ್ಲ. ನನ್ನ ಹಣ ನನ್ನ ದೇಶದ ಕಂಪನಿಗೇ ಸೇರಬೇಕು’ ಎಂಬುದು ಅವರ ಅಭಿಮತ.

 ಅ. 6ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಂದು ವಸ್ತ್ರವಿನ್ಯಾಸಕ ಪ್ರಸಾದ್ ಬಿದಪ್ಪ ಅವರಿಂದ ‘ಫ್ಯಾಷನ್ ಐಕಾನ್ ಗಾಂಧಿ’ ಪ್ರಾತ್ಯಕ್ಷಿಕೆ, ‘ರಂಗಾಯಣ’ ಮೈಸೂರು ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅವರಿಂದ ‘ಕಮಲಾದೇವಿ ಚಟ್ಟೋಪಾಧ್ಯಾಯ’ ನಾಟಕ, ಲೇಖಕಿ ‌‌ದು.ಸರಸ್ವತಿ ಅವರಿಂದ ‘ಎಲ್ಲಿ ಹೋದವೋ, ಎದೆಯ ಗೂಡಿನ ಹಕ್ಕಿಗಳು’ ಸ್ತ್ರೀಪರ ಏಕವ್ಯಕ್ತಿ ಪ್ರರ್ದಶನ, ಬಿಂದುಮಾಲಿನಿ, ವಾಸು ದೀಕ್ಷಿತ್, ಎಂ.ಡಿ.ಪಲ್ಲವಿ, ಅವರಿಂದ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಭಾರತದ ಏಕತೆಗಾಗಿ ಯುವಕರ ಸಾಮೂಹಿಕ ಸತ್ಯಾಗ್ರಹ:

ಭಾಗವಹಿಸುವವರು–ಪ್ರಸನ್ನ, ದು. ಸರಸ್ವತಿ, ಎಂ.ಡಿ. ‍ಪಲ್ಲವಿ, ವಾಸು ದೀಕ್ಷಿತ್, ಬಿಂದುಮಾಲಿನಿ ಮತ್ತಿತರರು. ಆಯೋಜನೆ–ಗ್ರಾಮ ಸೇವಾ ಸಂಘ. ಸ್ಥಳ–ರವೀಂದ್ರ ಕಲಾಕ್ಷೇತ್ರ, ಸಂಸ ಬಯಲು ರಂಗಮಂದಿರ. ಶನಿವಾರ ಸಂಜೆ ಬೆಳಿಗ್ಗೆ 9ರಿಂದ 4ರವರೆಗೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !