ನಾನು ಎಲ್ಲರ ಪ್ರಧಾನಿ: ಹಸೀನಾ

7
ಆರ್ಥಿಕ ಸುಧಾರಣೆಗೆ ಮೊದಲ ಆದ್ಯತೆ: ಭರವಸೆ

ನಾನು ಎಲ್ಲರ ಪ್ರಧಾನಿ: ಹಸೀನಾ

Published:
Updated:
Prajavani

ಢಾಕಾ: ‘ನಾನು ಎಲ್ಲರ ‍ಪ್ರಧಾನಿ’– ಹೀಗೆಂದು ತಮ್ಮ ಅಭೂತಪೂರ್ವ ಗೆಲುವಿನ ನಂತರ ಬಾಂಗ್ಲಾ ದೇಶದ ನಿಯೋಜಿತ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಇದೇ ವೇಳೆ, ತಮ್ಮ ಸರ್ಕಾರದ ಮೊದಲ ಆದ್ಯತೆ ಆರ್ಥಿಕ ಸುಧಾರಣೆ ಎಂದೂ ಹೇಳಿದ್ದಾರೆ.

ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಹಸೀನಾ ಅಲ್ಲಗಳೆದಿದ್ದಾರೆ. ‘ಒಂದು ವೇಳೆ ಅಕ್ರಮ ನಡೆದಿದ್ದರೆ ಚುನಾವಣಾ ಆಯೋಗವು ಮತದಾನ ರದ್ದುಪಡಿಸುತ್ತಿತ್ತು’ ಎಂದಿದ್ದಾರೆ.

40 ಸಾವಿರ ಮತಗಟ್ಟೆಗಳಲ್ಲಿ ಒಂದೆರಡು ಕಡೆ ಅಕ್ರಮಗಳಾಗಿರಬಹುದು. ಆದರೆ, ಇದರಿಂದ ಇಡೀ ಚುನಾವಣೆಯನ್ನೇ ಅಕ್ರಮ ಎನ್ನಲಾಗದು ಎಂದಿದ್ದಾರೆ.

ಸಂಸದರ ಪ್ರಮಾಣವಚನ ನಾಳೆ

ನೂತನ ಸಂಸದರು ಸಂಸತ್ತಿನಲ್ಲಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಆದರೆ  ಜೈಲುಶಿಕ್ಷೆಗೆ ಒಳಗಾಗಿರುವ ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ್‌ ನ್ಯಾಷನಲ್‌ ಪಾರ್ಟಿಯ (ಬಿಎನ್‌ಪಿ) ಸಂಸದರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಮಂಗಳವಾರ ತಿಳಿಸಿದ್ದಾರೆ.

***

ನಮ್ಮ ಪಕ್ಷ ಯಾವುದೇ ರೀತಿಯ ಸೇಡಿನ ರಾಜಕೀಯ ಮಾಡಲು ಮುಂದಾಗುವುದಿಲ್ಲ

-ಶೇಖ್‌ ಹಸೀನಾ, ಬಾಂಗ್ಲಾ ನಿಯೋಜಿತ ಪ್ರಧಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !