ಐಸಿಸಿ ಸಭೆಯತ್ತ ರೈತರ ಚಿತ್ತ; ಹಿಂಗಾರಿಗೆ ನೀರಿಲ್ಲ ?

7
ಪೂರ್ಣ ಪ್ರಮಾಣದಲ್ಲಿ ರಚನೆಗೊಳ್ಳದ ನೀರಾವರಿ ಸಲಹಾ ಸಮಿತಿ; ಸಭೆ ನಾಳೆ

ಐಸಿಸಿ ಸಭೆಯತ್ತ ರೈತರ ಚಿತ್ತ; ಹಿಂಗಾರಿಗೆ ನೀರಿಲ್ಲ ?

Published:
Updated:
Deccan Herald

ಆಲಮಟ್ಟಿ: ನೀರಾವರಿ ಸಲಹಾ ಸಮಿತಿಯ ಸಭೆ ಇದೇ 10ರ ಶನಿವಾರ ನಿಗದಿಯಾಗಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಚಿತ್ತ ಈ ಸಭೆಯ ನಿರ್ಧಾರದತ್ತ ನೆಟ್ಟಿದೆ.

ಮುಂಗಾರು ವಿಫಲಗೊಂಡಿದೆ. ಹಿಂಗಾರು ಮಳೆಯೂ ಸಕಾಲಕ್ಕೆ ಸುರಿಯದಾಗಿದೆ. ಇದರ ನಡುವೆ ಜಲಾಶಯದ ನೀರಿನ ಮಟ್ಟವೂ ದಿನೇ ದಿನೇ ಕುಸಿಯತೊಡಗಿದ್ದು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಗೆ ಮಹತ್ವ ಬಂದಿದೆ.

ನಾರಾಯಣಪುರ, ಆಲಮಟ್ಟಿ ಜಲಾಶಯದಿಂದ ನ.14ರವರೆಗೂ ಮುಂಗಾರು ಹಂಗಾಮಿಗೆ ನೀರು ಹರಿಸಬೇಕಿದೆ. ಈ ಎರಡೂ ಜಲಾಶಯದಲ್ಲಿ ಮುಂಗಾರು ಹಂಗಾಮಿಗೆ ನೀರು ಹರಿಸುವುದು ನಿಂತ ಬಳಿಕ 52 ಟಿಎಂಸಿ ಅಡಿ ನೀರಷ್ಟೇ ಉಳಿಯಲಿದೆ. ಈ ನೀರನ್ನೇ ಹಿಂಗಾರು ಹಂಗಾಮಿಗೆ ಕೊಡುವ ಕುರಿತ ನಿರ್ಧಾರ ಶನಿವಾರದ ಐಸಿಸಿ ಸಭೆಯಲ್ಲಿ ಪ್ರಕಟವಾಗಬೇಕಿದೆ. ಇದು ರೈತರಲ್ಲಿ ಆತಂಕ, ಕುತೂಹಲ ಎರಡನ್ನೂ ಮೂಡಿಸಿದೆ.

ಪೂರ್ಣ ಪ್ರಮಾಣದಲ್ಲಿ ರಚನೆಯಾಗದ ಐಸಿಸಿ:

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಾಲುವೆಗೆ ನೀರು ಹರಿಸಬೇಕೆಂಬ ಬೇಡಿಕೆ ಹೆಚ್ಚಿದ್ದರಿಂದ ತರಾತುರಿಯಲ್ಲಿ ಜುಲೈನಲ್ಲಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಅಧಿಕಾರಿ ಸದಸ್ಯರನ್ನು ಮಾತ್ರ ನೇಮಿಸಿ ಐಸಿಸಿ ರಚಿಸಲಾಗಿದೆ.

ಐಸಿಸಿ ಸಮಿತಿಯಲ್ಲಿ ಅಧ್ಯಕ್ಷ, ಅಧಿಕಾರಿ ಸದಸ್ಯರು, ಅಧಿಕಾರೇತರ ಸದಸ್ಯರು ಇರುತ್ತಾರೆ. ಅಧಿಕಾರೇತರ ಸದಸ್ಯರ ನೇಮಕವನ್ನು ನಂತರ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಯಾದಗಿರಿ, ರಾಯಚೂರ ಜಿಲ್ಲೆಗಳ ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರು, ಸಂಸದರು ಅಧಿಕಾರೇತರ ಸದಸ್ಯರಾಗಿರುತ್ತಿದ್ದರು. ಇವರು ಅಚ್ಚುಕಟ್ಟು ಪ್ರದೇಶದ ರೈತರನ್ನು ಪ್ರತಿನಿಧಿಸುತ್ತಾರೆ. ಆದರೆ ಇದೂವರೆಗೂ ಅಧಿಕಾರೇತರ ಸದಸ್ಯರ ನೇಮಕ ನಡೆದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !