ಚಿನ್ನದ ಐಸ್‌ಕ್ರೀಂ ತಿಂದ್ರು ಶಿಲ್ಪಾ!

7

ಚಿನ್ನದ ಐಸ್‌ಕ್ರೀಂ ತಿಂದ್ರು ಶಿಲ್ಪಾ!

Published:
Updated:
Deccan Herald

ಐಸ್‌ಕ್ರೀಂ ಎಂದ ಕೂಡಲೇ ಮಕ್ಕಳಷ್ಟೇ ಅಲ್ಲ, ದೊಡ್ಡವರ ನಾಲಗೆಯಲ್ಲೂ ಲಾಲಾರಸ ಉಕ್ಕುತ್ತದೆ. ಜಿಹ್ವಚಾಪಲ್ಯ ತಣಿಸುವಂತಹ ಈ ತಿನಿಸನ್ನು ವಿವಿಧ ಸ್ವಾದ, ರುಚಿಗಳಲ್ಲಿ ಸವಿಯಬಹುದು. ಆದರೆ ವಿಶೇಷವಾದ ‘ಗೋಲ್ಡನ್‌ ಲೀಫ್‌ ಐಸ್‌ಕ್ರೀಂ’ ರುಚಿಯನ್ನ ಎಂದಾದರೂ ಸವಿದಿದ್ದೀರಾ? ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಅವರು ಈ ವಿಶೇಷ ಐಸ್‌ಕ್ರೀಂ ಅನ್ನು ಪರಿಚಯಿಸಿದ್ದಾರೆ. 

ಈಚೆಗಷ್ಟೇ ಶಿಲ್ಪಾ ಬ್ಯಾಂಕಾಕ್‌ಗೆ ಭೇಟಿ ನೀಡಿದ್ದಾಗ ಈ ವಿಶೇಷ ತಿನಿಸಿನ ಬಗ್ಗೆ ಮಾಹಿತಿ ಪಡೆದು, ರೆಸ್ಟೊರೆಂಟ್‌ಗೆ ಭೇಟಿ ನೀಡಿ, ಅದರ ರುಚಿ ಸವಿಯುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ಐಸ್‌ಕ್ರೀಂ ತುಂಬಾ ರುಚಿಯಾಗಿದೆ. ನಾನು ತಿನ್ನುತ್ತಿರುವುದು ವೆನಿಲಾ ಸ್ವಾದದ ಐಸ್‌ಕ್ರೀಂ’ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಈವರೆಗೆ ಇದನ್ನು 7.5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 

ನೀರು ಬೆರೆಸದ ಹಾಲಿನಿಂದ ತಯಾರಿಸುವ ಈ ಐಸ್‌ಕ್ರಿಂಗೆ 24 ಕ್ಯಾರೆಟ್ ಗುಣಮಟ್ಟದ ಚಿನ್ನದ ಲೇಪನ ಮಾಡುತ್ತಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಸ್ವಾದಗಳಲ್ಲಿ ಇದನ್ನು ತಯಾರಿಸಿಕೊಡುತ್ತಾರೆ. ಇದರ ಬೆಲೆ ₹937! 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !