ವಿವಾದಕ್ಕೆ ಗುರಿಯಾದರೆ ನಾಯಕರಾಗುತ್ತಾರೆ

7
ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌

ವಿವಾದಕ್ಕೆ ಗುರಿಯಾದರೆ ನಾಯಕರಾಗುತ್ತಾರೆ

Published:
Updated:
ನಗರದ ಅರಮನೆ ಮೈದಾನದಲ್ಲಿ ಭಾನುವಾರ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷ ಶ್ರೀನಿವಾಸ್‌ ಅವರನ್ನು ಸಚಿವ ಡಿ.ಕೆ.ಶಿವಕುಮಾರ್‌ ಅವರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು

ಬೆಂಗಳೂರು: ‘ಹೆಚ್ಚು ವಿವಾದಕ್ಕೆ ಗುರಿಯಾಗುವವರೇ ಭವಿಷ್ಯದಲ್ಲಿ ನಾಯಕರಾಗಿ ಬೆಳೆಯುತ್ತಾರೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷ ಶ್ರೀನಿವಾಸ್‌ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ‘ಹೋರಾಟ, ಶ್ರಮ ಇರುವಲ್ಲಿ ಫಲವಿದ್ದೇ ಇದೆ. ಇದಕ್ಕೆ ಶ್ರೀನಿವಾಸ್ ಸಾಕ್ಷಿ’ ಎಂದರು.

‘ಪಕ್ಷದ ವಿದ್ಯಾರ್ಥಿ ಘಟಕದಿಂದ (ಎನ್‌ಎಸ್‌ಯುಐ) ತರಬೇತಿ ಪಡೆದು ಬ್ಲಾಕ್‌ಮಟ್ಟದಿಂದ ನಾಯಕರಾಗಿ ಬೆಳೆದವರು ಯಾವತ್ತೂ ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ’ ಎಂದು ಹೇಳಿದರು.

ಆಂಜನೇಯನಿಗೆ ಗೌರವ ಜಾಸ್ತಿ: ‘ರಾಮನಿಗಿಂತಲೂ ಆಂಜನೇಯನಿಗೆ ಹೆಚ್ಚು ಗೌರವ ಸಿಗುತ್ತದೆ. ಎಲ್ಲ ಊರುಗಳಲ್ಲಿ ಆಂಜನೇಯನ ದೇವಸ್ಥಾನವಿದೆ. ಆಂಜನೇಯನ ಸೇವೆ, ಭಕ್ತಿಯ ಕಾರಣಕ್ಕೆ ಅವನನ್ನು ಪೂಜಿಸುತ್ತಾರೆ. ಅದೇ ರೀತಿ ಕಾಂಗ್ರೆಸ್‌ನಲ್ಲೂ ಶ್ರಮ ವಹಿಸಿದವರಿಗೆ ಫಲ ಸಿಕ್ಕೇ ಸಿಗುತ್ತದೆ‘ ಎಂದರು.

ಶ್ರೀನಿವಾಸ್‌ ಮಾತನಾಡಿ, ‘ಮುತಾಲಿಕ್‌ಗೆ ಮಸಿ ಬಳಿದಾಗ ನನ್ನನ್ನು ಅಮಾನತು ಮಾಡಲು ಕೆಪಿಸಿಸಿಯಿಂದ ಮೂರು ಶಿಫಾರಸು ಆಗಿದ್ದವು. ಆಗ ನನ್ನನ್ನು ಉಳಿಸಿದ್ದು ಆಗ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಡಿ‌.ಕೆ.ಶಿವಕುಮಾರ್. ನನ್ನ ಕೊನೆ ಉಸಿರಿನವರಗೆ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !