ಬೆಂಗಳೂರು: ಅಕ್ರಮ ಗಾರ್ಮೆಂಟ್ ಡೈಯಿಂಗ್ ಫ್ಯಾಕ್ಟರಿಗಳ ಮೇಲೆ ದಾಳಿ, ಕಟ್ಟಡಗಳ ತೆರವು

7

ಬೆಂಗಳೂರು: ಅಕ್ರಮ ಗಾರ್ಮೆಂಟ್ ಡೈಯಿಂಗ್ ಫ್ಯಾಕ್ಟರಿಗಳ ಮೇಲೆ ದಾಳಿ, ಕಟ್ಟಡಗಳ ತೆರವು

Published:
Updated:

ಬೆಂಗಳೂರು: ಉತ್ತರ ತಾಲ್ಲೂಕಿನ ದಾಸರಹಳ್ಳಿ ವಲಯದಲ್ಲಿನ ಅನಧಿಕೃತ ಡೈಯಿಂಗ್ ಮತ್ತು ವಾಷಿಂಗ್ ಫ್ಯಾಕ್ಟರಿಗಳ ಮೇಲೆ ಶನಿವಾರ ದಾಳಿ ನಡೆಸಿ ಫ್ಯಾಕ್ಟರಿಗಳನ್ನು ಶನಿವಾರ ತೆರವುಗೊಳಿಸಲಾಯಿತು.

ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್, ಉತ್ತರ ತಾಲ್ಲೂಕು ತಹಶೀಲ್ದಾರ್‌ ತೇಜಸ್‌ಕುಮಾರ್‌, ಪರಿಸರ ಮಾಲಿನ್ಯ, ಕಾಮಿಕ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಅರ್ಕಾವತಿ ನದಿಗೆ ವಿಷಕಾರಿ ಡೈಯಿಂಗ್‌ನ ತ್ಯಾಜ್ಯ ನೀರು ಹರಿಸುತ್ತಿದ್ದ ಫ್ಯಾಕ್ಟರಿಗಳ ಕುರಿತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆಗಳನ್ನು ಮುಚ್ಚಲು ಆದೇಶಿಸಿತ್ತು.

ವರದಿಯಲ್ಲಿ ಡೈಯಿಂಗ್ ಫ್ಯಾಕ್ಟರಿಗಳು ಅರ್ಕಾವತಿ ನದಿಗೆ ವಿಷಕಾರಿ ಬಣ್ಣದ ನೀರು ಹರಿಸುತ್ತಿರುವ ಬಗ್ಗೆ ತಿಳಿಸಲಾಗಿತ್ತು.

ಬೆಂಗಳೂರು ನಗರ ಜಿಲ್ಲಾಡಳಿತ ಜಿಲ್ಲಾಧಿಕಾರಿ ವಿಜಯ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !