ಇಮ್ರಾನ್‌ಖಾನ್‌ ಆದಾಯ ₹3ಕೋಟಿ ಇಳಿಕೆ

ಬುಧವಾರ, ಮಾರ್ಚ್ 27, 2019
26 °C

ಇಮ್ರಾನ್‌ಖಾನ್‌ ಆದಾಯ ₹3ಕೋಟಿ ಇಳಿಕೆ

Published:
Updated:

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆದಾಯ ಮೂರು ವರ್ಷಗಳಲ್ಲಿ ₹3.09 ಕೋಟಿ ಇಳಿಕೆಯಾಗಿದೆ. ಆದರೆ, ವಿರೋಧ ಪಕ್ಷದ  ನಾಯಕರ ಆದಾಯ ನಿರಂತರವಾಗಿ ಹೆಚ್ಚುತ್ತಲೇ ಇದೆ ಎಂದು ಡಾನ್‌ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಇಸ್ಲಾಮಾಬಾದ್‌ನಲ್ಲಿದ್ದ ಅಪಾರ್ಟ್‌ಮೆಂಟ್‌ ಮಾರಾಟ ಮಾಡಿದ್ದರಿಂದ 2015ರಲ್ಲಿ ಇಮ್ರಾನ್‌ ಖಾನ್‌ರ ಆದಾಯ ₹10 ಲಕ್ಷದಷ್ಟು ಹೆಚ್ಚಾಗಿತ್ತು. ವಿದೇಶದಲ್ಲಿನ ಆಸ್ತಿ ಮಾರಾಟದಿಂದ ₹74 ಲಕ್ಷ ಆದಾಯ ಹೆಚ್ಚಾಗಿತ್ತು. ನಂತರ ಎರಡು ವರ್ಷಗಳಲ್ಲಿ ಅವರ ಆದಾಯ ಕ್ರಮೇಣ ಇಳಿಕೆಯಾಗಿದೆ ಎಂದು ಅದು ಹೇಳಿದೆ.

ಆದರೆ, ವಿರೋಧಪಕ್ಷದ ನಾಯಕ ಶಹಬಾಜ್‌ ಶರೀಫ್‌ ಅವರ ಆದಾಯ ಹೆಚ್ಚುತ್ತಲೇ ಹೋಗಿದೆ. 2015ರಲ್ಲಿ ₹76 ಲಕ್ಷ ಇದ್ದದ್ದು, 2017ರಲ್ಲಿ ₹1ಕೋಟಿ ದಾಟಿದೆ ಎಂದು ಡಾನ್‌ ಹೇಳಿದೆ.

ಜೊತೆಗೆ, ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರ ಆದಾಯ, 2015ರಲ್ಲಿ ₹10.5 ಕೋಟಿ ಇದ್ದದ್ದು, 2016ರಲ್ಲಿ ₹11.4 ಕೋಟಿಗೆ ಏರಿದೆ. 2017ರಲ್ಲಿ ಈ ಮೊತ್ತ ₹13.4 ಕೋಟಿಯಷ್ಟಿತ್ತು. ಅಲ್ಲದೆ, ಜರ್ದಾರಿ 7,748 ಎಕರೆ ಜಮೀನು ಹೊಂದಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಇಮ್ರಾನ್‌ ಖಾನ್‌ ಆದಾಯದಲ್ಲಿ ಇಳಿಕೆ

ವರ್ಷ ಆದಾಯ (ಕೋಟಿ ₹ಗಳಲ್ಲಿ)

* 2015 –3.45

* 2016 –1.29

* 2017 –0.47

 

Tags: 

ಬರಹ ಇಷ್ಟವಾಯಿತೆ?

 • 3

  Happy
 • 6

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !