ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅನುಕೂಲ ಎಂದ ಪಾಕ್‌

ಬುಧವಾರ, ಏಪ್ರಿಲ್ 24, 2019
31 °C
ಇಮ್ರಾನ್‌ ಖಾನ್‌ ಹೇಳಿಕೆ ಮೋದಿ ಭಕ್ತರನ್ನು ಗೊಂದಲಕ್ಕೆ ತಳ್ಳಿದೆ ಎಂದು ಮೆಹಬೂಬಾ ಮುಫ್ತಿ

ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅನುಕೂಲ ಎಂದ ಪಾಕ್‌

Published:
Updated:

ನವದೆಹಲಿ: ಭಾರತದಲ್ಲಿ ಬಿಜೆಪಿ ಗೆದ್ದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ಶಾಂತಿ ಮಾತುಕತೆ ನಡೆಯಲು ಉತ್ತಮ ಅವಕಾಶ ಲಭ್ಯವಾಗಲಿದೆ ಎಂದು ನಾನು ಭಾವಿಸಿದ್ದೇನೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಅಭಿಪ್ರಾಯಪಟ್ಟಿದ್ದಾರೆ. 

ಅಷ್ಟೇ ಅಲ್ಲ, ಅಲ್ಲಿನ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಇಮ್ರಾನ್‌ ಖಾನ್‌, ‘ಒಂದು ವೇಳೆ ಕಾಂಗ್ರೆಸ್‌ ಏನಾದರೂ ಅಧಿಕಾರಕ್ಕೆ ಬಂದರೆ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅದು ಹಿಂಜರಿಕೆ ತೋರಲಿದೆ. ಬಿಜೆಪಿ ಏನಾದರೂ ಗೆದ್ದರೆ ಕಾಶ್ಮೀರಕ್ಕೆ ಸಂಬಂಧಿಸಿದ ಕೆಲವೊಂದು ವಿಚಾರಗಳಲ್ಲಿ ಒಪ್ಪಂದಗಳು ಏರ್ಪಡಲಿವೆ,’ ಎಂದೂ ಅವರು ಹೇಳಿಕೊಂಡಿದ್ದಾರೆ. 

ಇಮ್ರಾನ್‌ ಖಾನ್‌ ಅವರು ಮೋದಿ ಅವರನ್ನು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೇತ್ಯನ್ಯ್ಹೂ ಅವರಿಗೆ ಹೋಲಿಕೆ ಮಾಡಿದ್ದಾರೆ. ‘ಬೆಂಜಮಿನ್‌ ಇಸ್ರೇಲ್‌ನಲ್ಲಿ ಭಯ ಮತ್ತು ರಾಷ್ಟ್ರೀಯತೆಯ ವಿಚಾರಗಳನ್ನು ಬಿತ್ತಿ ಅಧಿಕಾರಕ್ಕೆ ಬಂದವರು. ಅವರೊಬ್ಬ ಉತ್ತಮ ಚುನಾವಣಾ ತಜ್ಞ. ಮೋದಿ ಕೂಡ ಬೆಂಜಮಿನ್‌ ಅವರಂತೆಯೇ,’ ಎಂದು ಇ್ರಮಾನ್‌ ಖಾನ್‌ ಪ್ರತಿಪಾದಿಸಿದ್ದಾರೆ. 

‘ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ವಿಧಿ 370 ಅನ್ನು ರದ್ದು ಮಾಡುವುದಾಗಿ ಮೋದಿ ಹೇಳಿದ್ದಾರೆ. ಇದು ಮೋದಿ ಚುನಾವಣಾ ತಂತ್ರಗಾರಿಕೆ,’ ಎಂದು ಖಾನ್‌ ಹೇಳಿದ್ದಾರೆ. 

ಫೆ.14ರಂದು ಪುಲ್ವಾಮಾದಲ್ಲಿ ಭಾರತೀಯ ಸಿಆರ್‌ಪಿಎಫ್‌ ಪಡೆಯ ಮೇಲೆ ಭಯೋತ್ಪಾದಕ ದಾಳಿದ ನಡೆದ ನಂತರದ ಕಾಲಘಟದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಮನೆ ಮಾಡಿತ್ತು. ನಂತರದ ದಿನಗಳಲ್ಲಿ ಭಾರತೀಯ ಸೇನೆ ಮತ್ತು ಪಾಕಿಸ್ತಾನದ ವಿಚಾರಗಳು ಭಾರತದಲ್ಲಿ ಚುನಾವಣಾ ವಿಷಯಗಳಾಗಿ ಪರಿಣಮಿಸಿವೆ. ’ಕಾಂಗ್ರೆಸ್‌ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತದೆ. ಪಾಕಿಸ್ತಾನಕ್ಕೆ ಏನು ಬೇಕೋ ಅದನ್ನು ಕಾಂಗ್ರೆಸ್‌ ಮಾಡುತ್ತದೆ,’ ಎಂದು ಮೋದಿ ಆರೋಪ ಮಾಡಿದ್ದಾರೆ. 

ಹೀಗಿರುವಾಗಲೇ ‘ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ,’ ಪಾಕಿಸ್ತಾನದ ಪ್ರಧಾನಿ ಇ್ರಮಾನ್‌ ಅಭಿಪ್ರಾಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ.  

ಇನ್ನು ಇಮ್ರಾನ್‌ ಖಾನ್‌ ಹೀಗೆ ಹೇಳುತ್ತಲೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಮೋದಿ ಮತ್ತು ಅವರ ಅಭಿಮಾನಿಗಳನ್ನು ಟ್ವೀಟ್‌ ಮೂಲಕ ಗೇಲಿ ಮಾಡಿದ್ದಾರೆ  ‘ಬಹುಶಃ ಈಗ ಮೋದಿ ಭಕ್ತರು ತಲೆಕೆರೆದುಕೊಳ್ಳುತ್ತಿರಬಹುದು. ಇಮ್ರಾನ್‌ ಹೇಳಿಕೆಯನ್ನು ಸಂಭ್ರಮಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಭಕ್ತರಿರುತ್ತಾರೆ,‘ ಎಂದು ಕಾಲೆಳೆದಿದ್ದಾರೆ. 

ಒಮರ್‌ ಅಬ್ದುಲ್ಲಾ ಅವರೂ ಟ್ವೀಟ್‌ ಮಾಡಿದ್ದಾರೆ. ಈಗ ನೋಡಿ ಇಮ್ರಾನ್‌ ಖಾನ್‌ ಅವರಿಗೆ ಭಾರತದಲ್ಲಿ ಯಾರು ಪ್ರಧಾನಿಯಾಗಬೇಕಿದೆ? ಈಗ ಹೇಳಿ ಮೋದಿ ಹೇಳುವ ಟುಕಡೇ ಗ್ಯಾಂಗ್‌ ಯಾರು? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 34

  Happy
 • 4

  Amused
 • 2

  Sad
 • 4

  Frustrated
 • 1

  Angry

Comments:

0 comments

Write the first review for this !