ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪೂರ್ಣಾವಧಿ ಸರ್ಕಾರ ನಡೆಸುವುದಿಲ್ಲ: ಜರ್ದಾರಿ

7

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪೂರ್ಣಾವಧಿ ಸರ್ಕಾರ ನಡೆಸುವುದಿಲ್ಲ: ಜರ್ದಾರಿ

Published:
Updated:

ಇಸ್ಲಾಮಾಬಾದ್‌: ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರವು ಐದು ವರ್ಷ ಅವಧಿಯ ಆಡಳಿತ ಪೂರೈಸಲಾರದು ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಹೇಳಿದ್ದಾರೆ.

ಬದಿನ್‌ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಜರ್ದಾರಿ, ಖಾನ್‌ ಅವರನ್ನು ‘ಕೆಲವರ ಪ್ರಧಾನಿ’ ಎಂದು ಟೀಕಿಸಿದರು. ಮಾಜಿ ಕ್ರಿಕೆಟಿಗ ಹಾಗೂ ಪ್ರಧಾನಿ ಇಮ್ರಾನ್‌ ಖಾನ್‌ ಪೂರ್ಣಾವಧಿ ಸರ್ಕಾರ ನಡೆಸಲಾರರು ಎಂದು ಅಭಿಪ್ರಾಯಪಟ್ಟರು.

‘ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಜನರು ಸ್ವೀಕರಿಸಿದ್ದಾರೆ ಎಂದು ಭಾವಿಸಿದ್ದೀರಾ? ಪಂಜಾಬ್ ಪ್ರಾಂತ್ಯ ಸೇರಿದಂತೆ ದೇಶದ ಯಾರೊಬ್ಬರೂ ಅದನ್ನು ಒಪ್ಪಿಕೊಳ್ಳಲಾರರು’ ಎಂದು ಖಾನ್‌ ವಿರುದ್ಧ ಹರಿಹಾಯ್ದ ಅವರು, ‘ನೀವು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದೀರಿ. ಆಡಳಿತ ನಡೆಸುವುದನ್ನು ಕಲಿಯಿರಿ. ಒಂದು ದೇಶವನ್ನು ಮುನ್ನಡೆಸುವುದು ಹೇಗೆ ಎಂಬುದನ್ನು ಅರಿಯಿರಿ’ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !