ವಿದೇಶಾಂಗ ನೀತಿಗೆ ಚೀನಾ ಸ್ನೇಹವೇ ಅಡಿಪಾಯ: ಇಮ್ರಾನ್

7

ವಿದೇಶಾಂಗ ನೀತಿಗೆ ಚೀನಾ ಸ್ನೇಹವೇ ಅಡಿಪಾಯ: ಇಮ್ರಾನ್

Published:
Updated:

ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ನೀತಿಗೆ ಚೀನಾ ಜೊತೆಗಿನ ಸ್ನೇಹವೇ ಅಡಿಪಾಯ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

ಉಭಯ ದೇಶಗಳ ನಡುವಿನ ಬಹುಕೋಟಿ ಮೊತ್ತದ ‘ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್’ (ಸಿಪಿಇಸಿ) ಅನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಉನ್ನತ ನಿಯೋಗದ ಜೊತೆ ಇಮ್ರಾನ್ ಖಾನ್ ಅವರನ್ನು ಭಾನುವಾರ ಭೇಟಿಯಾಗಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಇ ಅವರು ದ್ವಿಪಕ್ಷೀಯ ಮೈತ್ರಿ ಬಲಗೊಳಿಸುವ ಕುರಿತು ಮಾತುಕತೆ ನಡೆಸಿದರು.

ಕಾರಿಡಾರ್‌ನಿಂದ ಎರಡೂ ದೇಶಗಳ ಜನರಿಗೆ ಆಗುವ ಲಾಭದ ಬಗ್ಗೆ ವಾಂಗ್ ಅವರು ಇಮ್ರಾನ್‌ಗೆ ಮನವರಿಕೆ ಮಾಡಿಕೊಟ್ಟರು. ಪಾಕಿಸ್ತಾನದ ಹೊಸ ಸರ್ಕಾರದ ಜೊತೆ ನಿಕಟವಾಗಿ ಕೆಲಸ ಮಾಡುವ ಚೀನಾದ ಇಂಗಿತವನ್ನು ಅವರು ವ್ಯಕ್ತಪಡಿಸಿದರು. 

ವಿಸ್ತರಣೆ: ಕಾರಿಡಾರ್ ಅನ್ನು ಅಫ್ಗಾನಿಸ್ತಾನದವರೆಗೂ ವಿಸ್ತರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ವಾಂಗ್ ತಿಳಿಸಿದರು. ಇದರಿಂದ ಪಶ್ಚಿಮ ಭಾಗದ ಕೊನೆಯಲ್ಲಿರುವ ಜನರಿಗೂ ನೆರವಾಗಲಿದೆ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !