ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಐನಾಪುರ ಮೇಲಗಿರೇಶ್ವರ ಜಾತ್ರೆ ಇಂದು

Published:
Updated:
Prajavani

ಐನಾಪುರ ಮಹಲ್: ಗ್ರಾಮದ ಮೇಲಗಿರೇಶ್ವರ ಜಾತ್ರೆ ಇದೇ 7ರ ಮಂಗಳವಾರ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಊರ ಬಾವಿಯಲ್ಲಿ ಗಂಗಾ ಸಿತಾಲ ನಡೆಯುವುದು. 10ಕ್ಕೆ ಪಲ್ಲಕ್ಕಿ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಹಲಿಗೆ ಹಾಗೂ ಸಕಲ ವಾದ್ಯಗಳೊಂದಿಗೆ ಸಾಗುವುದು.

ಮಧ್ಯಾಹ್ನ 2ಕ್ಕೆ ಅನ್ನ ಪ್ರಸಾದ. ಸಂಜೆ 4ಕ್ಕೆ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆ ನಡೆಯಲಿವೆ. ರಾತ್ರಿ 10ಕ್ಕೆ ದೇವರಹಿಪ್ಪರಗಿಯ ಕರಿಸಿದ್ಧೇಶ್ವರ ಡೊಳ್ಳಿನ ಗಾಯನ ಸಂಘ, ಗೊರನಾಳದ ಮಾಳಿಂಗರಾಯ ಡೊಳ್ಳಿನ ಸಂಘದ ವತಿಯಿಂದ ಡೊಳ್ಳಿನ ಪದ ಜರುಗಲಿವೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Post Comments (+)