ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರಲ್ಲಿ ಒಬ್ಬರು ಭಾರತೀಯರು ಮಾಸ್ಕ್‌ ಧರಿಸುವುದಿಲ್ಲ: ಸಮೀಕ್ಷೆ

Last Updated 4 ಡಿಸೆಂಬರ್ 2021, 13:07 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌ ರೂಪಾಂತರ ತಳಿ ಓಮೈಕ್ರಾನ್‌ ಪತ್ತೆಯಾಗಿರುವ ಮಧ್ಯೆಯೇ ಭಾರತದಲ್ಲಿ ಮುಖಗವಸು (ಮಾಸ್ಕ್‌) ಧರಿಸುವ ಮಾರ್ಗಸೂಚಿಗಳ ಅನುಸರಣೆ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂಬ ಕಳವಳಕಾರಿ ಅಂಶವನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಸಮೀಕ್ಷೆ ನಡೆಸಿದವರಲ್ಲಿ ಶೇ 2 ರಷ್ಟು ಜನರು ಮಾತ್ರ ತಮ್ಮ ಪ್ರದೇಶದಲ್ಲಿನ ಜನರು ಮಾಸ್ಕ್‌ ಧರಿಸುವ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿರುವುದಾಗಿ ಅದು ಹೇಳಿದೆ.

ಡಿಜಿಟಲ್‌ ಸಮುದಾಯ ಆಧಾರಿತ ವೇದಿಕೆಯಾದ ಲೋಕಲ್‌ ಸರ್ಕಲ್ಸ್‌ ಇತ್ತೀಚಿಗೆ ಸಮೀಕ್ಷೆಯೊಂದನ್ನು ನಡೆಸಿದೆ. ತಮ್ಮ ಪ್ರದೇಶದಲ್ಲಿನ ಅನೇಕ ಜನರು ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸುವುದಿಲ್ಲ ಎಂದು ಸಮೀಕ್ಷೆ ನಡೆಸಿದ ಮೂವರಲ್ಲಿ ಒಬ್ಬರು ಭಾರತೀಯರು ಹೇಳುತ್ತಾರೆ ಎಂದು ಲೋಕಲ್‌ ಸರ್ಕಲ್ಸ್‌ ಸಂಸ್ಥೆ ಹೇಳಿದೆ.

ಕಳೆದ ಏಪ್ರಿಲ್‌ನಲ್ಲಿ ಸಂಸ್ಥೆ ಭಾರತದ 364 ಜಿಲ್ಲೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರಿಂದ ಪ್ರತಿಕ್ರಿಯೆಗಳನ್ನು ಪಡೆದಿದೆ.

ಮಾಸ್ಕ್‌ ಧರಿಸುವ ಬಗ್ಗೆ ಜನರಲ್ಲಿ ಅಗತ್ಯ ಜಾಗೃತಿ ಮೂಡಿಸಬೇಕಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

‘ಓಮೈಕ್ರಾನ್‌ ವೈರಾಣು ಪತ್ತೆಯಾಗಿರುವ ಈ ಸಮಯದಲ್ಲಿ ಮಾಸ್ಕ್‌ ಧರಿಸುವ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಂಸ್ಥೆಯ ಸ್ಥಾಪಕ ಸಚಿನ್‌ ತಪಾರಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT