ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಿದ 1.1 ಲಕ್ಷ ಭಾರತೀಯರು

Last Updated 29 ಜುಲೈ 2022, 13:55 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಸರ್ದಾರ್‌ ಸಾಹಿಬ್‌ ಗುರುದ್ವಾರಕ್ಕೆ ಕರ್ತಾರ್‌ಪುರ ಕಾರಿಡಾರ್‌ಮೂಲಕ 1,10,670 ಭಾರತೀಯರು ಮತ್ತು ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಹೊಂದಿದ ನಾಗರಿಕರು ಭೇಟಿ ನೀಡಿದ್ದಾರೆ ಎಂದು ಶುಕ್ರವಾರ ಭಾರತ ಸರ್ಕಾರ ತಿಳಿಸಿದೆ.

ಭಾರತದ ಪಂಜಾಬ್‌ ರಾಜ್ಯದ ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ಸಾಹಿಬ್ ಗುರುದ್ವಾರದೊಂದಿಗೆ ಸರ್ದಾರ್‌ ಸಾಹಿಬ್‌ ಗುರುದ್ವಾರಕ್ಕೆ ಸಂಪರ್ಕವಿದೆ. ಈ ಎರಡು ಗುರುದ್ವಾರಗಳ ನಡುವಿನ ಮಾರ್ಗವನ್ನು ಕರ್ತಾರ್‌ಪುರದಲ್ಲಿ ನವೆಂಬರ್‌ 2019ರಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ

‘ನವೆಂಬರ್ 2019ರಿಂದ ಕರ್ತಾರ್‌ಪುರ ಕಾರಿಡಾರ್‌ ಮೂಲಕಸಾಹಿಬ್‌ ಗುರುದ್ವಾರಕ್ಕೆ 1,10,670ಕ್ಕೂ ಹೆಚ್ಚು ಭಾರತೀಯರು ಮತ್ತು ಭಾರತದ ಸಾಗರೋತ್ತರ ಪೌರತ್ವ ಕಾರ್ಡ್ ಹೊಂದಿರುವ ನಾಗರಿಕರು ಭೇಟಿ ನೀಡಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.‌

ಕರ್ತಾರ್‌ಪುರದಸರ್ದಾರ್‌ ಸಾಹಿಬ್‌ ಗುರುದ್ವಾರವುಡೇರಾ ಬಾಬಾ ನಾನಕ್‌ ಗುರುದ್ವಾರದಿಂದ, 4 ಕಿ.ಮೀ. ದೂರದಲ್ಲಿ ಪಾಕಿಸ್ತಾನದ ನರೋವಾಲ್ ಜಿಲ್ಲೆಯ ರಾವಿ ನದಿಯ ದಂಡೆಯಲ್ಲಿದೆ.

‘ಯಾತ್ರಾರ್ಥಿಗಳ ಇಚ್ಛೆಗೆ ಮಣಿದು, ಕರ್ತಾರ್‌ಪುರ ಮಾರ್ಗದ ಮೂಲಕ ಗುರುದ್ವಾರಕ್ಕೆ ಭೇಟಿ ನೀಡುವವರಿಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಭಾರತ ನಿರಂತರವಾಗಿ ಪಾಕಿಸ್ತಾನವನ್ನು ಒತ್ತಾಯಿಸುತ್ತಿದೆ. ಆದರೂ ಪಾಕಿಸ್ತಾನವು ಪ್ರತಿ ಭೇಟಿಗೆ ತಲಾ ₹1586.2 ರಷ್ಟು ಶುಲ್ಕವನ್ನು(20 ಯುಎಸ್‌ ಡಾಲರ್‌) ವಿಧಿಸುತ್ತಿದೆ‘ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT