ಸೋಮವಾರ, ಮಾರ್ಚ್ 27, 2023
31 °C

ನಳಂದ: 1200 ವರ್ಷಗಳಷ್ಟು ಹಳೆಯ ವಿಗ್ರಹಗಳು ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ‘ಪುರಾತನ ನಳಂದಾ ವಿಶ್ವವಿದ್ಯಾಲಯ ಬಳಿಯಲ್ಲಿರುವ ಕೊಳದ ಹೂಳು ತೆಗೆಯುವ ವೇಳೆ ಸುಮಾರು 1,200 ವರ್ಷಗಳಷ್ಟು ಹಳೆಯದಾದ ಎರಡು ಕಲ್ಲಿನ ವಿಗ್ರಹಗಳು ಪತ್ತೆಯಾಗಿವೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ನೀರನ್ನು ಸಂರಕ್ಷಿಸಲು ಆರಂಭಿಸಲಾದ 'ಜಲ್-ಜೀವನ್-ಹರಿಯಾಲಿ' ಯೋಜನೆಯಡಿಯಲ್ಲಿ ಕೊಳದ ಹೂಳು ತೆಗೆಯುವ ಸಂದರ್ಭದಲ್ಲಿ ಪ್ರಾಚೀನ ನಳಂದ ಮಹಾವೀರ ಸಮೀಪದ ಸರ್ಲಿಚಕ್ ಗ್ರಾಮದ ತಾರ್ಸಿನ್ಹ್ ಕೊಳದಿಂದಲ್ಲಿ ವಿಗ್ರಹಗಳು ಪತ್ತೆಯಾಗಿವೆ.

ಈ ವಿಗ್ರಹಗಳ ಕುರಿತ ಮಾಹಿತಿನ್ನು ಎಎಸ್‌ಐ ಆಗಲೀ ಅಥವಾ ಆಡಳಿತವಾಗಲೀ ಬಹಿರಂಗಪಡಿಸಿಲ್ಲ.

‘ಸರ್ಲಿಚಕ್ ಗ್ರಾಮಸ್ಥರು ಈ ವಿಗ್ರಹಗಳ ದೊರೆತ ಬಳಿಕ ಅವುಗಳಿಗೆ ದೇವಸ್ಥಾನ ಕಟ್ಟಿಸಲು ಮುಂದಾಗಿದ್ದರು. ಆ ಸ್ಥಳದಲ್ಲಿದ್ದ ನಮ್ಮ ಅಧಿಕಾರಿಗಳಿಗೆ ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎರಡೂ ವಿಗ್ರಹಗಳನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಈ ವಿಗ್ರಹಗಳು ಈಗ ಸ್ಥಳೀಯ ಪೊಲೀಸರ ವಶದಲ್ಲಿವೆ’ ಎಂದು ಅಧೀಕ್ಷಕ ಪುರಾತತ್ವಶಾಸ್ತ್ರಜ್ಞೆ ಗೌತಮಿ ಭಟ್ಟಾಚಾರ್ಯ (ಎಎಸ್‌ಐ ಪಟ್ನಾ ವಲಯ) ಅವರು ತಿಳಿಸಿದ್ದಾರೆ.

’ ಈ ವಿಗ್ರಹಗಳನ್ನು ನಳಂದ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲು ನಾವು ಬಯಸಿದ್ದೇವೆ. ಇಂಡಿಯನ್‌ ಟ್ರೆಷರ್‌ ಟ್ರೋವ್‌ ಆ್ಯಕ್ಟ್‌ 1878ರ ನಿಬಂಧನೆಗಳ ಪ್ರಕಾರ ವಿಗ್ರಹಗಳನ್ನು ಕೂಡಲೇ ಇಲಾಖೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ನಾನು ಮನವಿ ಮಾಡಿದ್ದೇನೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು