ಶನಿವಾರ, ಮೇ 15, 2021
25 °C

ಕೇರಳದಲ್ಲಿ ಉತ್ಸವದ ವೇಳೆ 15ರ ಬಾಲಕನ ಕೊಲೆ: ಆರೆಸ್ಸೆಸ್‌ನಿಂದ ಕೃತ್ಯ ಎಂದ ಪೋಷಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆಲಪ್ಪುಳ: ಪಡಯನಿವತ್ತಂನಲ್ಲಿ ಬುಧವಾರ ರಾತ್ರಿ ನಡೆದ ದೇವಾಲಯದ ಉತ್ಸವದ ಸಂದರ್ಭದಲ್ಲಿ ಜನರ ಗುಂಪೊಂದು 15 ವರ್ಷದ ಬಾಲಕನನ್ನು ಇರಿದು ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾದ (ಎಸ್‌ಎಫ್‌ಐ) ಕಾರ್ಯಕರ್ತನಾಗಿದ್ದ ಅಭಿಮನ್ಯು ಕೊಲೆಯಾದ ಬಾಲಕ. ಆರ್‌ಎಸ್‌ಎಸ್‌ ಸದಸ್ಯರು ಈ ಕೊಲೆ ಮಾಡಿದ್ದಾರೆ ಎಂದು ಬಾಲಕನ ಕುಟುಂಬದ ಮೂಲಗಳು ಆರೋಪಿಸಿವೆ.

ಈ ಪ್ರಕರಣದ ಆರೋಪಿ ಸಜಯ್‌ ದತ್‌ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ. ಅಲ್ಲದೆ ಆತನ ತಂದೆ ಮತ್ತು ಸಹೋದರನನ್ನು ವಶಕ್ಕೆ ಪಡೆದು ಈ ಕುರಿತು ಪ್ರಶ್ನಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾಗಿರುವ ಅಭಿಮನ್ಯು 10ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸದ್ಯದಲ್ಲಿಯೇ ಪರೀಕ್ಷೆಗಳನ್ನು ಎದುರಿಸಬೇಕಾಗಿತ್ತು.

ಅಭಿಮನ್ಯವಿನ ಹಿರಿಯ ಅಣ್ಣನನ್ನು (ಡಿವೈಎಫ್‌ಐ ಕಾರ್ಯಕರ್ತ) ಹುಡುಕಿಕೊಂಡು ಬಂದಿದ್ದ ಹಲ್ಲೆಕೋರರು, ಕೊನೆಗೆ ಅಭಿಮನ್ಯುವನ್ನು ಕೊಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

‘ಆತ ನನ್ನ ಎರಡನೇ ಮಗ. ಕಳೆದ ವರ್ಷವಷ್ಟೇ ತಾಯಿಯನ್ನು ಕಳೆದುಕೊಂಡಿದ್ದ. ಆತ ಶಾಲೆಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತನಾಗಿರಬಹುದು... ಅವನು ಕಮ್ಯುನಿಸ್ಟ್‌ ಕುಟುಂಬದ ಮಗ. ಆತನ ಕೊಲೆ ಏಕಾಯಿತು ಎಂಬುದು ಗೊತ್ತಿಲ್ಲ’ ಎಂದು ಅಭಿಮನ್ಯು ತಂದೆ ಅಂಬಿಲಿ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ನಡೆಸಿರುವ ವ್ಯವಸ್ಥಿತ ಕೊಲೆ ಎಂದು ಸಿಪಿಐ ಮುಖಂಡರು ದೂರಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ.

ಕೇರಳದಲ್ಲಿ ಎಂಟು ತಿಂಗಳಲ್ಲಿ ಎಡ ಪಕ್ಷದ ಏಳು ಕಾರ್ಯಕರ್ತರು ಕೊಲೆಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು