ಭಾನುವಾರ, ಅಕ್ಟೋಬರ್ 2, 2022
20 °C

ರಾಜ್ಯದ ಆರು ಪೊಲೀಸ್‌ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2022ನೇ ಸಾಲಿನಲ್ಲಿ ಉತ್ತಮ ತನಿಖೆ ನಡೆಸಿದ ಕರ್ನಾಟಕದ ಆರು ಪೊಲೀಸ್‌ ಅಧಿಕಾರಿಗಳು ಸೇರಿದಂತೆ ದೇಶದ 151 ಪೊಲೀಸ್‌ ಅಧಿಕಾರಿಗಳು ಕೇಂದ್ರ ಗೃಹ ಸಚಿವರ ಪದಕಕ್ಕೆ ಆಯ್ಕೆಯಾಗಿದ್ದಾರೆ. 

ಕರ್ನಾಟಕದಿಂದ ಹೆಚ್ಚುವರಿ ಪೊಲೀಸ್‌ ಅಧಿಕಾರಿ ಕೆ.ಲಕ್ಷ್ಮಿ ಗಣೇಶ್‌, ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಡಿವೈಎಸ್‌ಪಿ ಮೈಸೂರು ರಾಜೇಂದ್ರ ಗೌತಮ್‌, ಡಿವೈಎಸ್‌ಪಿ ಶಂಕರ ಕಾಳಪ್ಪ ಮರಿಹಾಳ್‌, ಡಿವೈಎಸ್‌ಪಿ ಶಂಕರಗೌಡ ವೀರನಗೌಡ ಪಾಟೀಲ, ಇನ್‌ಸ್ಪೆಕ್ಟರ್‌ ಎಚ್‌.ಗುರು ಬಸವರಾಜ್‌ ಅವರು ಪದಕಕ್ಕೆ ಆಯ್ಕೆಯಾದವರು. 

ತನಿಖೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಪೊಲೀಸರಿಗೆ ಪದಕ ನೀಡುವುದನ್ನು ಆರಂಭಿಸಲಾಯಿತು. ಪ್ರತಿ ವರ್ಷ ಆಗಸ್ಟ್‌ 12ರಂದು ಪದಕ ಪುರಸ್ಕೃತರ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು