ಶುಕ್ರವಾರ, ಜುಲೈ 1, 2022
24 °C

ಉತ್ತರ ಪ್ರದೇಶ: ಗುಡ್ಡ ಕುಸಿದು ಬಾಲಕಿ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬದೌನ್ (ಉತ್ತರ ಪ್ರದೇಶ): ಗುಡ್ಡ ಕುಸಿದು 17 ವರ್ಷದ ಬಾಲಕಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದಲ್ಲಿ ಭಾನುವಾರ ಸಂಭವಿಸಿದೆ.

ಬದೌನ್‌ ಜಿಲ್ಲೆಯ ಉಶೈನ್ ಪ್ರದೇಶದ ಬಳಿ ಇರುವ ಅಣೆಕಟ್ಟೆ ಬಳಿ ಮಣ್ಣು ಅಗೆಯುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇಲ್ಲಿನ ಹಿರಿಯ ಪೊಲೀಸ್‌ ಸೂಪರಿಂಟೆಂಡೆಂಟ್‌ ಸಂಕಲ್ಪ್‌ ಶರ್ಮಾ ಅವರು, ನಾಲ್ವರು ಬಾಲಕಿಯರು ಅಣೆಕಟ್ಟೆ ಬಳಿ ಮಣ್ಣು ಅಗೆಯಲು ಹೋಗಿದ್ದರು. ಈ ವೇಳೆ ದಿಬ್ಬದ ಒಂದು ಭಾಗ ಅವರ ಮೇಲೆ ಕುಸಿದಿದೆ. ಅವರ ಚೀರಾಟವನ್ನು ಕೇಳಿ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಬಾಲಕಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು