ಶನಿವಾರ, ಮೇ 8, 2021
18 °C

₹ 72 ಲಕ್ಷ ಲಂಚ ಪ್ರಕರಣ: ಸಿಬಿಐನಿಂದ ಇಬ್ಬರ ಬಂಧನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ₹ 72 ಲಕ್ಷ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ, ಭಾನುವಾರ ಇಬ್ಬರನ್ನು ಬಂಧಿಸಿದೆ. ಕೇಂದ್ರ ಗಣಿ ಸುರಕ್ಷತೆ ನಿರ್ದೇಶನಾಲಯದ (ಡಿಜಿಎಂಎಸ್) ಉಪ ಪ್ರಧಾನ ನಿರ್ದೇಶಕ ಅರವಿಂದ್ ಕುಮಾರ್ ಅವರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ನೇಮಕಾತಿಯಲ್ಲಿ ನಿರ್ದಿಷ್ಟ ವ್ಯಕ್ತಿಗಳ ಪರವಾಗಿ ಸಂದರ್ಶನ ಮಂಡಳಿ ಸದಸ್ಯರ ಮೇಲೆ ಪ್ರಭಾವ ಬೀರಲು ಸಂಚು ನಡೆದಿತ್ತು ಎನ್ನಲಾಗಿದೆ. ಈ ಸಂಬಂಧ ಬಿಹಾರದ ಲಖಿಸರಾಯ್‌ನಲ್ಲಿ ಸಿಬಿಐ ಅಧಿಕಾರಿಗಳು ತ್ರಿಲೋಕಿ ನಾಥ್‌ ಸಿಂಗ್‌ ಮತ್ತು ಅರವಿಂದ್ ಕುಮಾರ್‌ ಅವರ ಸಂಬಂಧಿ ಕೈಲಾಶ್‌ ಮಂಡಲ್ ಎಂಬವರನ್ನು ಬಂಧಿಸಿದರು.

ಇಬ್ಬರು ಆರೋಪಿತ ಅಧಿಕಾರಿ ಪರವಾಗಿ ಲಂಚದ ಮೊದಲ ಕಂತಾಗಿ ₹ 35 ಲಕ್ಷ ಪಡೆಯುತ್ತಿದ್ದರು. ಮ್ಯಾನೇಜರ್‌ ಸ್ಥಾನಕ್ಕೆ ಕಂಪ್ಯೂಟರ್‌ ಆಧರಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದ ಕೆಲವರಿಗೆ ಕೆಲಸ ಮಾಡಿಸಿಕೊಡಲು ಅರವಿಂದ ಕುಮಾರರ್ ಸಂಚು ನಡೆಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

ಸಂದರ್ಶನ ಮಂಡಳಿ ಸದಸ್ಯರ ಮೇಲೆ ಪ್ರಭಾವ ಬೀರಲು ಪ್ರತಿ ಅಭ್ಯರ್ಥಿಯಿಂದ ₹ 1.5 ಲಕ್ಷ ಸಂಗ್ರಹಿಸಲಾಗಿತ್ತು. ಸಿಂಗ್‌ ಅವರು ಶಿಫಾರಸು ಮಾಡಿದ್ದ 48 ಅಭ್ಯರ್ಥಿಗಳಿಂದ ₹ 72 ಲಕ್ಷ ಸಂಗ್ರಹಿಸಲಾಗಿತ್ತು ಎಂದು ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು