ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ 20 ಮೀನುಗಾರರನ್ನು ಬಿಡುಗಡೆಗೊಳಿಸಿದ ಪಾಕ್‌

Last Updated 19 ಜೂನ್ 2022, 10:31 IST
ಅಕ್ಷರ ಗಾತ್ರ

ಕರಾಚಿ: ತನ್ನ ದೇಶದ ವ್ಯಾಪ್ತಿಯಲ್ಲಿರುವ ಸಮುದ್ರದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ, ಕಳೆದ ಐದು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತದ 20 ಮಂದಿ ಮೀನುಗಾರರನ್ನು ಪಾಕಿಸ್ತಾನವು ಸೌಹಾರ್ದತೆಯ ಆಧಾರದ ಮೇಲೆ ಭಾನುವಾರ ಬಿಡುಗಡೆಗೊಳಿಸಿದೆ.

‘20 ಮೀನುಗಾರರನ್ನು ಲಾಂಧಿ ಪ್ರದೇಶದ ಮಾಲಿರ್‌ ಜೈಲಿನಲ್ಲಿರಿಸಲಾಗಿತ್ತು. ಅವರನ್ನು ಈಧಿ ಸಂಸ್ಥೆಯ ಉಸ್ತುವಾರಿ ಹಾಗೂ ಪೊಲೀಸರ ರಕ್ಷಣೆಯೊಂದಿಗೆ ವಾಘಾ ಗಡಿಯಲ್ಲಿನ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ’ ಎಂದು ಜೈಲ್‌ ಸೂಪರಿಂಟೆಂಡೆಂಟ್‌ ಮಹಮದ್‌ ಇರ್ಷಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT