ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮರ್‌ ಖಾಲಿದ್ ಜಾಮಿನು ಅರ್ಜಿಮಾ. 14ರಂದು ಕೋರ್ಟ್‌ ಆದೇಶ

Last Updated 3 ಮಾರ್ಚ್ 2022, 14:38 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಫೆಬ್ರುವರಿ 2020ರಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯುನ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿ ಕೋರ್ಟ್ ಮಾರ್ಚ್ 14ರಂದು ಪ್ರಕಟಿಸಲಿದೆ.

ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಅಮಿತಾಬ್‌ ರಾವತ್‌ ಅವರು, ಆದೇಶವನ್ನು ಕಾಯ್ದಿರಿಸಲಾಗಿದೆ ಎಂದು ಪ್ರಕಟಿಸಿದರು. ದೆಹಲಿ ಗಲಭೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಚು ನಡೆಸಿದ್ದ ಆರೋಪ ಖಲೀದ್‌ ಮೇಲಿದೆ.

ವಿಚಾರಣೆಯ ವೇಳೆ ನಮ್ಮ ವಿರುದ್ಧ ಹೊರಿಸಲಾದ ಆರೋಪ ಸಾಬೀತಿಗೆ ಪೂರಕ ಸಾಕ್ಷ್ಯ ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿ ಕೋರ್ಟ್ ಗಮನಕ್ಕೆ ತಂದರು. ಗಲಭೆಗೆ ಸಂಬಂಧಿಸಿದ ಖಾಲಿದ್ ಮತ್ತು ಇತರರ ವಿರುದ್ದ ಯುಎಪಿಎ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಫೆಬ್ರುವರಿ 2020ರ ಗಲಭೆಯಲ್ಲಿ 53 ಜನರು ಸತ್ತಿದ್ದು, ಇತರೆ 700 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT