ಶನಿವಾರ, ಸೆಪ್ಟೆಂಬರ್ 18, 2021
30 °C

ಕೇರಳದಲ್ಲಿ ಸತತ 5ನೇ ದಿನವೂ 20ಸಾವಿರಕ್ಕಿಂತ ಅಧಿಕ ಪ್ರಕರಣ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಸತತ ಐದನೇ ದಿನವೂ ಕೇರಳದಲ್ಲಿ 20,000ಕ್ಕಿಂತಲೂ ಹೆಚ್ಚು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಆದರೆ ಸಾವಿನ ಸಂಖ್ಯೆ ಮತ್ತು ಪಾಸಿಟಿವಿಟಿ ದರದಲ್ಲಿ ಅಲ್ಪ ಇಳಿಕೆಯಾಗಿದೆ.

ಶನಿವಾರ 20,624 ಪ್ರಕರಣಗಳು ವರದಿಯಾಗಿದ್ದರೆ, 80 ಮಂದಿ ಮೃತಪಟ್ಟಿದ್ದಾರೆ. ಪಾಸಿಟಿವಿಟಿ ದರ ಒಂದು ದಿನದ ಅಂತರದಲ್ಲಿ ಶೇ. 13.61 ರಿಂದ ಶೇ. 12.31ಕ್ಕೆ ಇಳಿದಿದೆ. 

ಶನಿವಾರ ವರದಿಯಾದ ಪ್ರಕರಣಗಳೂ ಸೇರಿದರೆ ಕೇರಳದ ಒಟ್ಟಾರೆ ಸೋಂಕಿತರ ಸಂಖ್ಯೆ33,90,761ಕ್ಕೆ ಏರಿಕೆಯಾಗಿದೆ. ಸಾವಿಗೀಡಾದವರ ಸಂಖ್ಯೆ 16,781ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ. 

24 ಗಂಟೆಗಳಲ್ಲಿ 16,865 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಒಟ್ಟು 32,08,969 ಮಂದಿ ಈ ವರೆಗೆ ಚೇತರಿಕೆ ಕಂಡಿದ್ದಾರೆ. ಸದ್ಯ ರಾಜ್ಯದಲ್ಲಿ 1,64,500 ಸಕ್ರಿಯ ಪ್ರಕರಣಗಳಿವೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಮಲಪ್ಪುರಂ (3,474) ತ್ರಿಶೂರ್ (2693), ಪಾಲಕ್ಕಾಡ್ (2209), ಕೋಳಿಕ್ಕೋಡ್ (2113), ಎರ್ನಾಕುಲಂ (2072), ಕೊಲ್ಲಂ (1371), ಕಣ್ಣೂರು (1243), ಆಲಪ್ಪುಳ (1120), ಕೊಟ್ಟಾಯಂ 1111) ಮತ್ತು ತಿರುವನಂತಪುರ (969) ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಜಿಲ್ಲೆಗಳಾಗಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು