ಶುಕ್ರವಾರ, ಜನವರಿ 27, 2023
26 °C

ಮುಳುಗಡೆಯಾದ ಬಾರ್ಜ್‌ನ 26 ಜನ ಇನ್ನೂ ನಾಪತ್ತೆ: ಶೋಧಕಾರ್ಯಕ್ಕೆ ಮುಳುಗು ತಜ್ಞರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ತೌತೆ ಚಂಡಮಾರುತ ಹೊಡೆತಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ಪಿ305 ಬಾರ್ಜ್‌ನಲ್ಲಿದ್ದವರ ಪೈಕಿ 15 ಜನರು ಹಾಗೂ ವರಪ್ರದ ಬೋಟ್‌ನಲ್ಲಿದ್ದವರ ಪೈಕಿ 11 ಜನರಿಗಾಗಿ ಶೋಧ ಕಾರ್ಯ ಶನಿವಾರವೂ ಮುಂದುವರಿದಿದೆ.

ಶುಕ್ರವಾರ 11 ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ರಕ್ಷಣಾ ಮತ್ತು ಶೋಧ ಕಾರ್ಯವನ್ನು ಚುರುಕುಗೊಳಿಸಿರುವ ನೌಕಾಪಡೆ, ಮುಳುಗು ತಜ್ಞರನ್ನು ನಿಯೋಜಿಸಿದೆ.

‘ಪಿ 305 ಹಾಗೂ ವರಪ್ರದ ಬೋಟ್‌ನಲ್ಲಿದ್ದವರ ಪೈಕಿ ಒಟ್ಟು 26 ಜನರ ಪತ್ತೆಗಾಗಿ ಎಲ್ಲ ಪ್ರಯತ್ನಗಳೂ ಮುಂದುವರಿದಿವೆ. ಮುಳುಗು ತಜ್ಞರನ್ನು ಹೊತ್ತ ಐಎನ್‌ಎಸ್‌ ಮಕರ್‌ ಹಾಗೂ ಐಎನ್‌ಎಸ್‌ ತರಸ್‌ ಹಡಗುಗಳು ಇಂದು ಬೆಳಿಗ್ಗೆ ಮುಂಬೈನಿಂದ ತೆರಳಿದ್ದು, ಶೋಧಕಾರ್ಯವನ್ನು ಮುಂದುವರಿಸಲಾಗಿದೆ’ ಎಂದು ನೌಕಾಪಡೆಯ ವಕ್ತಾರರೊಬ್ಬರು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು