ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ರೋಹಿಂಗ್ಯಾ ಸಮುದಾಯದ ಶಂಕಿತ 26 ಮಂದಿ ಬಂಧನ

Last Updated 30 ಮೇ 2022, 12:47 IST
ಅಕ್ಷರ ಗಾತ್ರ

ಸಿಲ್ಚಾರ್‌: ಅಸ್ಸಾಂನ ಕ್ಯಾಚಾರ್‌ ಜಿಲ್ಲೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಮ್ಯಾನ್ಮಾರ್‌ನ ರೋಹಿಂಗ್ಯಾ ಸಮುದಾಯದ ಶಂಕಿತ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಉದ್ಯೋಗ ಅರಸಿ ಮೂರು ಕುಟುಂಬಗಳ 26 ಮಂದಿ ಗುವಾಹಟಿಯಿಂದ ಮೂರು ವಾಹನಗಳಲ್ಲಿ ಕ್ಯಾಚಾರ್‌ ಜಿಲ್ಲೆಗೆ ಬಂದಿದ್ದಾರೆ. ಸಿಲ್ಚಾರ್‌ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಇವರನ್ನು ತಡೆದು ಪರಿಶೀಲಿಸಿದಾಗ ಇವರ ಬಳಿ ಯಾವುದೇ ದಾಖಲೆಗಳಿರಲಿಲ್ಲ ಎಂದಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇವರಲ್ಲಿ ಆರು ಮಹಿಳೆಯರು ಸೇರಿದಂತೆ 12 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಏಳು ಮಕ್ಕಳಿಗೆ ಅವರ ತಾಯಂದಿರೊಂದಿಗೆ ಇರಲು ಅವಕಾಶ ನೀಡಲಾಗಿದೆ ಮತ್ತು ಏಳು ಮಕ್ಕಳನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.

ಈ ಮೂರು ಕುಟುಂಬಗಳು 2012ರಲ್ಲಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಗಡಿಯೊಳಗೆ ಪ್ರವೇಶಿಸಿ ಅಲ್ಲಿನ ಮಾಲ್ಡಾದಲ್ಲಿ ಆಶ್ರಯ ಪಡೆದಿದ್ದವು. ಬಳಿಕ ಜಮ್ಮುವಿಗೆ ತೆರಳಿದ್ದವು ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT