ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿಯಾಗದ 280 ನೇಮಕಾತಿ ಸಂಸ್ಥೆ ಕರ್ನಾಟಕದಲ್ಲಿ ಸಕ್ರಿಯ

ವಿದೇಶಗಳಲ್ಲಿ ಉದ್ಯೋಗ ಒದಗಿಸುವ ಸಂಸ್ಥೆಗಳ ವಿರುದ್ಧ ದೂರು
Last Updated 11 ಸೆಪ್ಟೆಂಬರ್ 2020, 9:40 IST
ಅಕ್ಷರ ಗಾತ್ರ

ಪಣಜಿ: ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೇಮಕಾತಿ ಸಂಸ್ಥೆಗಳ ಪೈಕಿಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ 280 ಸಂಸ್ಥೆಗಳು ನೋಂದಣಿಯನ್ನೇ ಮಾಡಿಸಿಲ್ಲ ಎಂದು ವಲಸಿಗರ ರಕ್ಷಣಾ ಕಚೇರಿ (ಕರ್ನಾಟಕ ಮತ್ತು ಗೋವಾ ವ್ಯಾಪ್ತಿ) ಮೂಲಗಳು ಹೇಳಿವೆ.

‘ಗೋವಾದಲ್ಲಿರುವ 32 ನೇಮಕಾತಿ ಸಂಸ್ಥೆಗಳು ಸಹ ನೋಂದಣಿ ಮಾಡಿಸಿಲ್ಲ. ಈ ಎರಡೂ ರಾಜ್ಯಗಳಲ್ಲಿರುವ ನೋಂದಣಿ ಮಾಡಿಸದ ಸಂಸ್ಥೆಗಳ ವಿರುದ್ಧ ದೂರುಗಳು ದಾಖಲಾಗಿದ್ದು, ತನಿಖೆ ಆರಂಭಿಸಿದ್ದೇವೆ’ ಎಂದು ವಲಸಿಗರ ರಕ್ಷಣಾಧಿಕಾರಿ ಶುಭಂ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೋವಾದಲ್ಲಿ 8, ಕರ್ನಾಟಕದಲ್ಲಿ 20 ನೋಂದಾಯಿತ ನೇಮಕಾತಿ ಸಂಸ್ಥೆಗಳಿದ್ದು, ದೇಶದಲ್ಲಿ ಇಂತಹ ಸಂಸ್ಥೆಗಳ ಒಟ್ಟು ಸಂಖ್ಯೆ 1,484. ಅತಿ ಹೆಚ್ಚು 700 ಸಂಸ್ಥೆಗಳು ಮುಂಬೈ ನಗರದಲ್ಲಿವೆ’ ಎಂದೂ ಅವರು ತಿಳಿಸಿದರು.

ಉದ್ಯೋಗ ಅರಸಿ ವಿದೇಶಗಳಿಗೆ ತೆರಳುವವರ ಹಿತಾಸಕ್ತಿ ಕಾಪಾಡುವ ಸಲುವಾಗಿ 2019ರ ಡಿಸೆಂಬರ್‌ನಲ್ಲಿ ವಲಸಿಗರ ರಕ್ಷಣಾ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಮತ್ತು ಗೋವಾ ವ್ಯಾಪ್ತಿ ಹೊಂದಿರುವ ಕಚೇರಿ ಸೇರಿದಂತೆ ದೇಶದಲ್ಲಿ ಒಟ್ಟು 13 ಪ್ರಾದೇಶಿಕ ಕಚೇರಿಗಳಿವೆ.

ನಿಗದಿತ ಶುಲ್ಕವನ್ನು ಪಾವತಿಸಿದ ನಂತರವೂ ಈ ನೇಮಕಾತಿ ಸಂಸ್ಥೆಗಳು ಉದ್ಯೋಗ ಕೊಡಿಸುವಲ್ಲಿ ವಿಫಲವಾಗಿವೆ. ತಮಗೆ ತಿಳಿಸಿದ್ದ ದೇಶದ ಬದಲಾಗಿ ಬೇರೆ ದೇಶದಲ್ಲಿ ಉದ್ಯೋಗ ನೀಡಲಾಗಿದೆ ಎಂಬ ಬಗ್ಗೆಯೇ ಹೆಚ್ಚಿನ ದೂರುಗಳು ಸಲ್ಲಿಕೆಯಾಗಿವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT