ಮಂಗಳವಾರ, ಮಾರ್ಚ್ 28, 2023
31 °C

ಮುಂಬೈ: ಕ್ಲಬ್‌ನ 5ನೇ ಮಹಡಿಯಿಂದ ಬಿದ್ದು ಬಾಲಕ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಫಿಫಾ ವಿಶ್ವಕಪ್‌ ಫೈನಲ್ ವೀಕ್ಷಿಸಲು ದಕ್ಷಿಣ ಮುಂಬೈನ ಕ್ಲಬ್‌ವೊಂದಕ್ಕೆ ತನ್ನ ಪೋಷಕರೊಂದಿಗೆ ತೆರಳಿದ್ದ ಮೂರು ವರ್ಷದ ಬಾಲಕನೊಬ್ಬ ಐದನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

‘ಹೃದಯಾಂಶು ರಾಥೋಡ್‌ ಮೃತಪಟ್ಟ ಬಾಲಕ. ಚರ್ಚ್‌ಗೇಟ್‌ ಬಳಿಯ ಗಾರ್‌ವೇರ್‌ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ. ಶೌಚಾಯಲಕ್ಕೆ ಹೋಗಿ ವಾಪಸ್‌ ಬರುವಾಗ, ಮೆಟ್ಟಿಲಿನ ಬಳಿಯ ಸಂದಿನಿಂದ ಜಾರಿ ಬಾಲಕ ಕೆಳಗೆ ಬಿದ್ದಿದ್ದಾನೆ’ ಎಂದೂ ಮರೀನ್‌ ಡ್ರೈವ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ನೆಲ ಮಹಡಿಯಲ್ಲಿದ್ದ 11 ವರ್ಷದ ಹುಡುಗನಿಂದ ತಮ್ಮ ಮಗ ಮೇಲಿನಿಂದ ಬಿದ್ದಿರುವುದು ಬಾಲಕನ ಪೋಷಕರಿಗೆ ಗೊತ್ತಾಗಿದೆ. ಕೂಡಲೇ ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ, ತಲೆಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಗಾಯಗಳಾಗಿದ್ದರಿಂದ ಬಾಲಕ ಅದಾಗಲೇ ಮೃತಪಟ್ಟಿದ್ದ’ ಎಂದರು.

‘ಪ್ರಕರಣ ಕುರಿತಂತೆ 11 ವರ್ಷದ ಬಾಲಕ ಮತ್ತು ಭದ್ರತಾ ಕಾವಲುಗಾರನ ಹೇಳಿಕೆಯನ್ನು ಪಡೆಯಲಾಗಿದೆ. ತನಿಖೆ ಮುಂದುವರಿದಿದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು